ಹೈದರಾಬಾದ್:ಭಾರತೀಯ ಚೆಸ್ ಆಟಗಾರ್ತಿ ವೈಶಾಲಿ ರಮೇಶ್‌ಬಾಬು ಅವರು ಶುಕ್ರವಾರ ಸ್ಪೇನ್‌ನಲ್ಲಿ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ 2,500 ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ರ್‍ಯಾಂಕಿಂಗ್ ಪಾಯಿಂಟ್ಗಳಿಸುವ ಮೂಲಕ ತಮ್ಮ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿ ಗಳಿಸಿದ್ದಾರೆ, ಅಲ್ಲದೇ ಇವರು ಮೂರನೇ ಭಾರತೀಯ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ.
ಕೋನೇರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಅವರ ನಂತರ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಮೂರನೇ ಮಹಿಳಾ ಆಟಗಾರ್ತಿ. ಲೆಜೆಂಡರಿ ವಿಶ್ವನಾಥನ್ ಆನಂದ್, ಹಂಪಿ, ದ್ರೋಣವಲ್ಲಿ, ದಿಬ್ಯೇಂದು ಬರುವಾ, ರಮೇಶ್‌ಬಾಬು ಪ್ರಜ್ಞಾನಂದ ಮುಂತಾದವರು ಸೇರಿದಂತೆ ಈ ಪ್ರಶಸ್ತಿಯನ್ನು ಪಡೆದ 80ಕ್ಕೂ ಹೆಚ್ಚು ಭಾರತೀಯ ಚೆಸ್ ಆಟಗಾರರ ಪಟ್ಟಿ ಸೇರಿಕೊಂಡಿದ್ದಾರೆ.
18 ವರ್ಷ ವಯಸ್ಸಿನ ಯುವ ಚೆಸ್ ಆಟಗಾರ್ತಿ ವೈಶಾಲಿ ಚೆಸ್ ಸೆನ್ಸೇಶನ್ ಆರ್. ಪ್ರಜ್ಞಾನಂದ ಅವರ ಸಹೋದರಿಯಾಗಿದ್ದಾರೆ. ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಮೊದಲ ಸಹೋದರ- ಸಹೋದರಿ ಜೋಡಿ ಎಂಬ ಖ್ಯಾತಿಗೂ ಇಬ್ಬರು ಒಳಪಟ್ಟಿದ್ದಾರೆ. ಇವರಿಬ್ಬರ ಸಾಧನೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದನೆ ಸಲ್ಲಿಸಿದ್ದಾರೆ.
ವೈಶಾಲಿ ಪ್ರಸ್ತುತ ವಿಶ್ವ ನಂ. ಲೈವ್ ರೇಟಿಂಗ್‌ಗಳಲ್ಲಿ 11ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುಂದೆ ಅವರಿಂದ ಹಲವು ಅದ್ಭುತ ಪ್ರದರ್ಶನಗಳ ನಿರೀಕ್ಷೆ ಇದ್ದು ಟಾಪ್ 10 ಒಳಗೆ ಬರುವ ನಿರೀಕ್ಷೆ ಇದೆ. Xtracon ಓಪನ್ 2019, 8ನೇ ಫಿಶರ್ ಸ್ಮಾರಕ - ಹೆರಾಕ್ಲಿಯನ್ ಗ್ರ್ಯಾಂಡ್ ಮಾಸ್ಟರ್ 2022, ಕತಾರ್ ಮಾಸ್ಟರ್ಸ್ 2023 ಮತ್ತು FIDE ಮಹಿಳಾ ಗ್ರಾಂಡ್ ಸ್ವಿಸ್ 2023ರ ಪ್ರದರ್ಶನಗಳು ಅವರನ್ನು ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಗೆ ಕೊಂಡೊಯ್ದಿದೆ.
4ನೇ ಎಲ್ಲೋಬ್ರೆಗಾಟ್ ಓಪನ್‌ನ ಎರಡನೇ ಸುತ್ತಿನಲ್ಲಿ ಟ್ಯಾಮರ್ ತಾರಿಕ್ ಸೆಲ್ಬೆಸ್ ವಿರುದ್ಧ ಆಕೆಯ ಇತ್ತೀಚಿನ ಗೆಲುವು ಆಕೆಯ ಇಎಲ್ಒ ರೇಟಿಂಗ್ ಅನ್ನು 2501.5 ಕ್ಕೆ ಏರಿಸಿತು. ಈಗ, ಅವರು ಮೂರನೇ ಸುತ್ತಿನಲ್ಲಿ ಅರ್ಮೇನಿಯಾ ನಂ.3 ಶ್ರೇಯಾಂಕದ ಸ್ಯಾಮ್ವೆಲ್ ಟೆರ್-ಸಹಕ್ಯಾನ್ (ARM, 2618) ಅವರನ್ನು ಎದುರಿಸಲಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಎಕ್ಸ್ ಆ್ಯಪ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಪೋಸ್ಟ್ನಲ್ಲಿ ಅವರು, "ಅಭಿನಂದನೆಗಳು, @ವೈಶಾಲಿ ರಮೇಶ್‌ಬಾಬು ಭಾರತದಿಂದ ಮೂರನೇ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಮತ್ತು ತಮಿಳುನಾಡಿನ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಗೆದ್ದಿದ್ದಕ್ಕೆ. 2023 ನಿಮಗೆ ಅದ್ಭುತವಾಗಿದೆ. ನಿಮ್ಮ ಸಹೋದರ @ ಪ್ರಜ್ಞಾನಂದ ಜೊತೆಗೆ ಪಂದ್ಯಾವಳಿಗೆ ಅರ್ಹತೆ ಪಡೆದ ಮೊದಲ ಸಹೋದರಿ - ಸಹೋದರ ಜೋಡಿಯಾಗಿ ನೀವು ಇತಿಹಾಸವನ್ನು ನಿರ್ಮಿಸಿದ್ದೀರಿ. ನೀವು ಈಗ ಮೊದಲ ಗ್ರಾಂಡ್ ಮಾಸ್ಟರ್ ಸಹೋದರ ಜೋಡಿಯಾಗಿದ್ದೀರಿ. ನಿಮ್ಮ ಸಾಧನೆಗಳ ಬಗ್ಗೆ ನಾವು ಅಪಾರವಾಗಿ ಹೆಮ್ಮೆಪಡುತ್ತೇವೆ ಮತ್ತು ನಿಮ್ಮ ಗಮನಾರ್ಹ ಪ್ರಯಾಣವು ಮಹತ್ವಾಕಾಂಕ್ಷಿ ಚೆಸ್ ಉತ್ಸಾಹಿಗಳಿಗೆ ಸ್ಫೂರ್ತಿಯಾಗಿದೆ ಮತ್ತು ನಮ್ಮ ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದೆ!" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅತಿ ಹೆಚ್ಚು ಟಿ-20 ಪಂದ್ಯ ಗೆದ್ದು ದಾಖಲೆ: ಪಾಕಿಸ್ತಾನ ಹಿಂದಿಕ್ಕಿ ಅಗ್ರಸ್ಥಾನಕ್ಕೆರಿದ ಭಾರತ