ಟೋಕಿಯೋ(ಜಪಾನ್): ಟೋಕಿಯೋ ಒಲಿಂಪಿಕ್ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಆಟಗಾರರು ಮತ್ತು ಕ್ರೀಡಾ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಈ ನಡುವೆ19 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 106ಕ್ಕೆ ತಲುಪಿದೆ.
ಟೋಕಿಯೊ ಒಲಿಂಪಿಕ್ ಆಯೋಜಕರು ತಮ್ಮ ದೈನಂದಿನ ಕೋವಿಡ್ ಪ್ರಕರಣಗಳ ಅಪ್ಡೇಟ್ನಲ್ಲಿ, 3 ಕ್ರೀಡಾಪಟುಗಳು, ಆಟಗಳಿಗೆ ಸಂಬಂಧಿಸಿದ 10 ಸಿಬ್ಬಂದಿ, ಮಾಧ್ಯಮ ಮತ್ತು ಈವೆಂಟ್‌ಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಘೋಷಿಸಿದ್ದಾರೆ.