ಟೋಕಿಯೋ: ಒಂದು ವರ್ಷ ಮುಂದೂಡಲ್ಪಟ್ಟಿದ್ದ ಟೋಕಿಯೋ ಒಲಿಂಪಿಕ್ಸ್ ಶುಕ್ರವಾರ ಕೋವಿಡ್ ಬಿಕ್ಕಟ್ಟಿನ ನಡುವೆಯೂ ಶುಕ್ರವಾರ ಉದ್ಘಾಟನೆಗೊಳ್ಳುತ್ತಿದೆ. ಈಗಾಗಲೇ ಬುಧವಾರದಿಂದ ಸಾಫ್ಟ್ಬಾಲ್ ಮತ್ತು ಫುಟ್ಬಾಲ್ ಪಂದ್ಯಗಳು ಆರಂಭಗೊಂಡಿವೆ. ಆದರೆ ಜುಲೈ 23ರಂದು ಅಧಿಕೃತವಾಗಿ 32ನೇ ಆವೃತ್ತಿಯ ಮಹಾಕ್ರೀಡಾಕೂಟ ಆರಂಭವಾಗಲಿದೆ.
15 ದಿನಗಳ ಕ್ರೀಡಾಕೂಟದಲ್ಲಿ ಮೊದಲ ದಿನ ಎರಡು ಕ್ರೀಡೆಗಳು ನಡೆಯಲಿವೆ. ಅರ್ಚರಿ ಮತ್ತು ರೋಯಿಂಗ್ ಒಲಿಂಪಿಕ್ಸ್ ಉದ್ಘಾಟನೆಯಾಗುವುದಕ್ಕೆ ಮುನ್ನ ಶುಕ್ರವಾರ ಬೆಳಿಗ್ಗೆ ಆರಂಭವಾಗಲಿದೆ.
ಮೊದಲ ದಿನದ ಒಲಿಂಪಿಕ್ಸ: ಅರ್ಚರಿಯಲ್ಲಿ ದೀಪಿಕಾ ಕುಮಾರಿ-ಆತನು ದಾಸ್ ಕಣಕ್ಕೆ ಮೊದಲ ದಿನ ಅರ್ಚರಿಯಲ್ಲಿ ಭಾರತದಿಂದ ಮಿಕ್ಸಡ್ ಡಬಲ್ಸ್ ಮತ್ತು ಪುರುಷರ ಡಬಲ್ಸ್ನಿಂದ 4 ಮಂದಿ ಕಣಕ್ಕಿಳಿಯಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಂದೀಪ್ ರಾಯ್ ಮೊದಲ ದಿನದ ಸ್ಪರ್ಧೆಯಲ್ಲಿ ಭಾರತದ ಭಾಗವಾಗಲಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟ ಭಾರತದಲ್ಲಿ ಸೋನಿ ಟೆನ್ ಚಾನೆಲ್ನಲ್ಲಿ ನೇರಪ್ರಸಾರವಾಗಲಿದೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ..