ನವದೆಹಲಿ: ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಒಲಿಂಪಿಯನ್ ಸುಶೀಲ್ ಕುಮಾರ್ ಮತ್ತು ಜೊತೆಗಾರ ಅಜಯ್ ಕುಮಾರ್ರನ್ನು ದೆಹಲಿಯ ವಿಶೇಷ ಪೊಲೀಸ್ ತಂಡ ಬಂಧನ ಮಾಡಿದ್ದು, ರೋಹಿಣಿ ಜಿಲ್ಲಾ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಶೀಲ್ ಕುಮಾರ್ ಮತ್ತು ಜೊತೆಗಾರ ಅಜಯ್ ಕುಮಾರ್ 18 ದಿನಗಳ ಕಾಲ ಪೊಲೀಸರ ಕಣ್ಣು ತಪ್ಪಿಸಿ ದೆಹಲಿ, ಯುಪಿ, ಹರಿದ್ವಾರ, ಪಂಜಾಬ್ ಮತ್ತು ಹರಿಯಾಣದಲ್ಲಿ ತಲೆಮರೆಸಿಕೊಂಡಿದ್ದರು ಎನ್ನುವ ವಿಚಾರ ಬಯಲಾಗಿದೆ.
ಇವರು ಪೊಲೀಸರಿಗೆ ಗೊತ್ತಾಗದ ಹಾಗೆ ಇಂಟರ್ನೆಟ್ ಕರೆ ಮೂಲಕ ತಮ್ಮ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಇವರು ಮಹಿಳಾ ಕ್ರೀಡಾಪಟುಗೆ ಸೇರಿದ ಸ್ಕೂಟಿಯಲ್ಲಿ ತಮ್ಮ ಸಹೋದ್ಯೋಗಿಯೊಬ್ಬರಿಂದ ಹಣ ಪಡೆಯಲು ಹೊರಟಿದ್ದ ವೇಳೆ ದೆಹಲಿಯ ವಿಶೇಷ ತಂಡ ಇವರನ್ನ ಬಂಧನ ಮಾಡಿತ್ತು.
ಘಟನೆಯ ನಂತರ ಸುಶೀಲ್ ತನ್ನ ಮೊಬೈಲ್ ಫೋನ್ ಬಳಸುತ್ತಿಲ್ಲ ಎಂದು ಪ್ರಾಥಮಿಕ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಅವರು ಆರಂಭದಲ್ಲಿ ಎರಡು ಸಿಮ್ ಕಾರ್ಡ್ ಬಳಕೆ ಮಾಡಿ ಕರೆಗಳನ್ನು ಮಾಡುತ್ತಿದ್ದರು.
ಆದರೆ, ನಂತರ ಅವರು ಇಂಟರ್ನೆಟ್ ಕರೆಗಳನ್ನು ಬಳಸಲು ಪ್ರಾರಂಭಿಸಿದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳೆದ 18 ದಿನಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದರು. ದೆಹಲಿಯಲ್ಲದೆ, ಹರಿದ್ವಾರ, ಯುಪಿ, ಹರಿಯಾಣ ಮತ್ತು ಪಂಜಾಬ್‌ನಲ್ಲೂ ಇವರು ತಲೆಮರೆಸಿಕೊಂಡಿದ್ದರು.
ಪಂಜಾಬ್‌ನಲ್ಲಿ ಶರಣಾಗಲು ಬಯಸಿದ್ದ ಸುಶೀಲ್ :ವಿಶೇಷ ಸೆಲ್‌ನ ಕೌಂಟರ್ ಇಂಟೆಲಿಜೆನ್ಸ್ ತಂಡ ತನ್ನ ಪರವಾಗಿ ನಿರಂತರವಾಗಿ ಸ್ಕೌಟ್ ಮಾಡುತ್ತಿದೆ ಎಂದು ಆರೋಪಿ ಸುಶೀಲ್ ಪೊಲೀಸರಿಗೆ ತಿಳಿಸಿದ್ದಾರೆ. ಅವರು ಎರಡು ಸಂದರ್ಭಗಳಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದರಂತೆ.
ಸುಶೀಲ್ ಈ ಘಟನೆಯಿಂದಾಗಿ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದು, ಇದರಿಂದಾಗಿ ಅವರು ಅಸಮಾಧಾನಗೊಂಡು ಪಂಜಾಬ್‌ನಲ್ಲಿ ಶರಣಾಗಲು ಬಯಸಿದ್ದರಂತೆ. ಪಂಜಾಬ್‌ನಲ್ಲಿ ಪೊಲೀಸರಿಗೆ ಶರಣಾಗಲು ಸಿದ್ಧರಾಗಿದ್ದರು. ಆದರೆ, ನಂತರ ಅವರ ಯೋಜನೆಯನ್ನ ಬದಲಾಯಿಸಿದ್ದರು.
ರಸ್ತೆ ಮೂಲಕ ದೆಹಲಿಯ ಬದಲು ಗುರುಗ್ರಾಮ್‌ಗೆ ಹೋಗಿದ್ದರು. ಇಲ್ಲಿ ಅವರು ಶನಿವಾರ ಮಧ್ಯಾಹ್ನ ಗುರುಗ್ರಾಮ್ನಲ್ಲಿ ತನ್ನ ಸ್ನೇಹಿತರನ್ನು ಭೇಟಿಯಾಗಿ, ನಂತರ ದೆಹಲಿ ಕಡೆ ಪ್ರಯಾಣ ಬೆಳೆಸಿದ್ದರು.
ಸುಶೀಲ್‌ಗೆ ಸಹಾಯ ಮಾಡಿದ ಮಹಿಳಾ ಕ್ರಿಡಾಪಟು: ದೆಹಲಿ ಕ್ಯಾಂಟ್‌ನಿಂದ ಮಹಿಳೆಯೊಬ್ಬರು ಹರಿ ನಗರದ ಅವರ ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಈ ಮಹಿಳೆ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಆಟಗಾರ್ತಿ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪರ ಆಡಿದ್ದಾರೆ ಎನ್ನಲಾಗಿದೆ.
ಅವಳು ಸುಶೀಲ್ನನ್ನು ಹರಿ ನಗರದಲ್ಲಿರುವ ಮನೆಗೆ ಕರೆದೊಯ್ದ, ಅಲ್ಲಿಂದ ಅವನನ್ನು ಭಾನುವಾರ ಬೆಳಗ್ಗೆ ತನ್ನ ಸ್ಕೂಟಿ ನೀಡಿ ಕಳಿಸಿದ್ದಳು. ಸುಶೀಲ್ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ತನ್ನ ಸಹಚರರಿಂದ ಹಣವನ್ನು ತೆಗೆದುಕೊಳ್ಳಬೇಕಾಗಿತ್ತು.
ಆದರೆ, ಆತನ ಆಗಮನದ ಮೊದಲು ಪೊಲೀಸ್ ತಂಡ ಆತನ ಸಹಚರರನ್ನು ಬಂಧಿಸಿತ್ತು. ಈ ಮಹಿಳಾ ಆಟಗಾರ್ತಿಯ ಜೊತೆ ತಾನು ನಾಲ್ಕು ವರ್ಷಗಳಿಂದ ಸ್ನೇಹದಲ್ಲಿ ಇದ್ದೆ ಎಂದು ಆರೋಪಿತ ಸುಶೀಲ್ ಪೊಲೀಸರಿಗೆ ತಿಳಿಸಿದ್ದಾನೆ.
18 ದಿನಗಳಲ್ಲಿ ಈ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಆರೋಪಿತರು :ವಿಚಾರಣೆ ವೇಳೆ ಸುಶೀಲ್ ದೆಹಲಿಯಿಂದ ಪರಾರಿಯಾದ ನಂತರ ಉತ್ತರಾಖಂಡಕ್ಕೆ ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಒಂದು ರಾತ್ರಿ ಅಲ್ಲಿಯೇ ಇದ್ದ ನಂತರ, ಅವನು ಋಷಿಕೇಶ್ಗೆ ಹೋಗಿದ್ದೆ, ಅಲ್ಲಿ ಸ್ನೇಹಿತ ನನಗೆ ಸಹಾಯ ಮಾಡಲು ನಿರಾಕರಿಸಿದನು.
ಅಲ್ಲಿಂದ ಹಿಂದಿರುಗಿ ಮುಜಫರ್ನಗರದಲ್ಲಿ ಸ್ವಲ್ಪ ಕಾಲ ಇದ್ದೆ. ಯುಪಿಯಿಂದ ಹಿಂದಿರುಗಿದ ನಂತರ ಬಹದ್ದೂರ್‌ಗೆ ಹೋಗಿ ಅಲ್ಲಿಂದ ಜಿಂದ್‌ಗೆ ಹೋಗಿದ್ದೆ. ಜಿಂದ್‌ನಲ್ಲಿ ಇಬ್ಬರು ಹಳೆಯ ಕುಸ್ತಿಪಟುಗಳನ್ನು ಭೇಟಿಯಾದೆ, ಅವರು ಚಂಡೀಗಢ್‌ಗೆ ಹೋಗಲು ಸಹಾಯ ಮಾಡಿದರು.
ಚಂಡೀಗಢದಲ್ಲಿ 2 ದಿನಗಳ ಕಾಲ ಇದ್ದೆ. ನಂತರ ಭಟಿಂಡಾಕ್ಕೆ ಬಂದು ಅಲ್ಲಿಂದ ಮೊಹಾಲಿಗೆ ಹೋಗಿದ್ದೆ. ಅಲ್ಲಿ ಪಂಜಾಬ್ ಪೊಲೀಸರನ್ನ ಸಂಪರ್ಕಿಸಿ ಶರಣಾಗುವಂತೆ ನಿರ್ಧರಿಸಿದ್ದೆ. ಆದರೆ, ನಂತರ ಮನಸ್ಸು ಬದಲಾಯಿಸಿ ದೆಹಲಿ ಪೊಲೀಸರಿಗೆ ಶರಣಾಗಲು ಬಯಸಿದ್ದೆ.
ಮೊಹಾಲಿಯಿಂದ ದೆಹಲಿಗೆ ಬರುವ ಬದಲು ಗುರುಗ್ರಾಮ್‌ಗೆ ಹೋದೆವು. ನಾನು ಅಲ್ಲಿಂದ ನನ್ನ ಸ್ನೇಹಿತರ ಸಹಾಯದಿಂದ ನನ್ನ ಮತ್ತು ಅಜಯ್ ಅವರನ್ನು ದೆಹಲಿ ಕ್ಯಾಂಟ್ ಪ್ರದೇಶದಲ್ಲಿ ಬಿಟ್ಟರು, ಅಲ್ಲಿಂದ ಮಹಿಳಾ ಆಟಗಾರ್ತಿ ನಮ್ಮಿಬ್ಬರನ್ನೂ ಹರಿ ನಗರದ ತಮ್ಮ ಮನೆಗೆ ಕರೆದೊಯ್ದರು ಎಂದು ಸುಶೀಲ್ ವಿಚಾರಣೆ ವೇಳೆ ತಿಳಿಸಿದ್ದಾರೆ.
ವಿಚಾರಣೆ ನಡೆಸಲಿರುವ ಕ್ರೈಂ ಬ್ರ್ಯಾಂಚ್ :ಈಗ ದೆಹಲಿ ಪೊಲೀಸರು ಎಲ್ಲಾ ದಾಖಲೆಗಳ ಜೊತೆಗೆ ಸುಶೀಲ್ ಮತ್ತು ಅಜಯ್ ಅವರನ್ನೂ ಕ್ರೈಂ ಬ್ರ್ಯಾಂಚ್ಗೆ ಹಸ್ತಾಂತರಿಸಿದ್ದಾರೆ. ಅಪರಾಧ ವಿಭಾಗವು ಇಡೀ ವಿಷಯದ ಬಗ್ಗೆ ಸುಶೀಲ್ ಹಾಗೂ ಅಜಯ್ ವಿಚಾರಣಗೆ ಒಳಪಡಿಸಲಿದ್ದು, ಈ ಕೇಸ್ನ ಸಂಪೂರ್ಣ ಮಾಹಿತಿ ಕಲೆ ಹಾಕಲಿದೆ.