ಭುವನೇಶ್ವರ್: ಅಸ್ಸಾಂನಲ್ಲಿ ಪ್ರವಾಹದಿಂದ ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದು , ಅವರಿಗೆ ನೆರವಾಗುವಂತೆ ಭಾರತದ ಓಟಗಾರ್ತಿ ಹಿಮಾ ದಾಸ್ ದೇಶದ ಜನತೆ ಹಾಗೂ ಕಾರ್ಪೊರೆಟ್ ಕಂಪನಿಗಳನ್ನು ಕೋರಿಕೊಂಡಿದ್ದಾರೆ.
ಪ್ರವಾಹದಿಂದ ನಮ್ಮ ರಾಜ್ಯದ 30 ಜಿಲ್ಲೆಗಳಿಗೆ ತೊಂದರೆಯಾಗಿದ್ದು, ಜನಸಾಮಾನ್ಯರ ಸ್ಥಿತಿ ಹೇಳಲಾರದ ಸ್ಥಿತಿ ತಲುಪಿದೆ. ಪ್ರವಾಹ ಪೀಡಿತರಿಗೆ ನೆರವಾಗಲು ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ದಯವಿಟ್ಟು ನೀವು ಕೂಡ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದು ಕೆಲವು ತಿಂಗಳುಗಳಿಂದ ಅಸ್ಸಾಂನಲ್ಲಿ ಹಲವಾರು ಬಾರಿ ಪ್ರವಾಹ ಸಂಭವಿಸಿದೆ. ಇರುವ 33 ಜಿಲ್ಲೆಗಳಲ್ಲಿ 30 ಜಿಲ್ಲೆಯ ಜನರು ಪ್ರವಾಹದಿಂದ ತತ್ತರಿಸಿವೆ. 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 47 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ನೆಲೆ ಕಳೆದುಕೊಂಡಿದ್ದಾರೆ. ಇನ್ನು 4175 ಹಳ್ಳಿಗಳು,90,000 ಹೆಕ್ಟೇರ್ ಕೃಷಿಭೂಮಿ ಪ್ರವಾಹದಿಂದ ಮುಳುಗಡೆ ಹೊಂದಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ನಲ್ಲಿ ಹುದ್ದೆಯಲ್ಲಿರುವ ಹಿಮಾದಾಸ್ ತಮ್ಮ ಅರ್ಧ ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಜೊತೆಗೆ ದೇಶದ ನಾಗರಿಕರನ್ನು ಹಾಗೂ ಕಾರ್ಪೊರೇಟ್ ಕಂಪನಿಗಳನ್ನು ನೆರೆ ಸಂತ್ರಸ್ತರಿಗೆ ನೆರವಾಗಲು ಕೋರಿಕೊಂಡಿದ್ದಾರೆ.