ಸಖೀರ್ (ಬಹ್ರೇನ್):ಬಹ್ರೇನ್ ಜಿಪಿಯಲ್ಲಿ ನಡೆದ ಮೊದಲ ರೇಸಿಂಗ್ ಲ್ಯಾಪ್‌ನ ಟರ್ನ್ 4ನಲ್ಲಿ ಸ್ಪಿನ್ ಮೂಲಕ ಎಫ್ 1 ಚೊಚ್ಚಲ ಪಂದ್ಯವನ್ನು ಪ್ರಾರಂಭಿಸಿದ ಫಾರ್ಮುಲಾ ಒನ್ ದಂತಕತೆ ಮೈಕಲ್ ಶುಮಾಕರ್ ಅವರ ಪುತ್ರ ಮೈಕ್ ತಮ್ಮ ರೇಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ರೇಸ್ ತಮಗೆ ಶೇ. 90ರಷ್ಟು ಸಂತಸವಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.
"ನಾನು ಶೇ.90ರಷ್ಟು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. ಶೇ. 10ರಷ್ಟು ಇಲ್ಲ. ಏಕೆಂದರೆ ಸ್ಪಿನ್ ಮರು ಪ್ರಾರಂಭಿಸುವಾಗ ನಾನು ಕಾರಿನಲ್ಲಿ ಮಾಡಿದ ತಪ್ಪಿನಿಂದಾಗಿ ಹಿನ್ನಡೆಯೂ ಆಗಿದೆ ಎಂದು ಅವರು ಹೇಳಿದ್ದಾರೆ.
"ಅದೃಷ್ಟವಶಾತ್ ಕಾರು ಇನ್ನೂ ಡ್ರೈವಬಲ್ ಆಗಿತ್ತು ಮತ್ತು ಎಲ್ಲವೂ ಸರಿಯಾಗಿದೆ. ಈ ರೇಸ್ನಿಂದ ಉತ್ತಮ ಅನುಭವ ಪಡೆದಿದ್ದೇನೆ. ಹೀಗಾಗಿ ಇಲ್ಲಿ ಪಡೆದ ಅನುಭವವನ್ನು ವಾರಾಂತ್ಯದಲ್ಲಿ ಬರುವ ಆಟದಲ್ಲಿ ಉಪಯೋಗಿಸುತ್ತೇನೆ" ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಮೈಕ್ ಶುಮಾಕರ್, ಫಾರ್ಮುಲಾ 1 ದಂತಕತೆ ಮೈಕಲ್ ಶುಮಾಕರ್ ಅವರ ಪುತ್ರರಾಗಿದ್ದಾರೆ. ಜರ್ಮನ್ ರೇಸರ್ ಮೈಕಲ್ ಶುಮಾಕರ್ 7 ಫಾರ್ಮೂಲಾ ಒನ್ ಗೆದ್ದು ದಾಖಲೆ ಬರೆದವರು, 2013ರಲ್ಲಿ ಸ್ಕೈಯಿಂಗ್ ಆಡುತ್ತಿದ್ದ ವೇಳೆ ಆದ ಅಪಘಾತದಲ್ಲಿ ಶುಮೇಕರ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. 6 ತಿಂಗಳ ಬಳಿಕ 2014ರಲ್ಲಿ ಶುಮಾಕರ್ ಕೋಮಾದಿಂದ ಹೊರಬಂದಿದ್ದರು. ಕೋಮಾದಿಂದ ಹೊರಬಂದಿದ್ದರೂ ಮೈಕಲ್ಗೆ ಮನೆಯಲ್ಲಿ ರಹಸ್ಯವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ವಿಜರ್‌ಲೆಂಡ್‌ನ ಲುಸ್ನಾನ್ನೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸೆಪ್ಟೆಂಬರ್ 2014ರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಮೈಕಲ್ ಶುಮಾಕರ್ ಕೋಶ ಚಿಕಿತ್ಸೆಗಾಗಿ ಪ್ಯಾರಿಸ್’ನ ಆಸ್ಫತ್ರೆ ಸೇರಿದ್ದರು.