ಭಾರತದ ಚೆಸ್ ಲೋಕದಲ್ಲಿ ಮಿನುಗುತ್ತಿರುವ ತಮಿಳುನಾಡಿನ ಜೂನಿಯರ್ ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದ ಅವರು, ಈ ವರ್ಷದಲ್ಲಿ ಎರಡನೇ ಬಾರಿಗೆ ವಿಶ್ವ ನಂಬರ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿದ್ದಾರೆ.
ಚೆಸ್ಸೇಬಲ್ ಮಾಸ್ಟರ್ಸ್-16 ಆನ್‌ಲೈನ್ ಚೆಸ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲಸನ್ಗೆ ಪ್ರಜ್ಞಾನಂದ್ ಶಾಕ್ ನೀಡಿದ್ದಾರೆ. ತೀವ್ರ ಹಣಾಹಣಿಯಿಂದ ಕೂಡಿದ್ದ ಇಬ್ಬರ ನಡುವಿನ ಪಂದ್ಯ ಡ್ರಾದತ್ತ ಸಾಗುತ್ತಿತ್ತು. ಈ ವೇಳೆ ಚಾಂಪಿಯನ್ ಕಾರ್ಲಸನ್ ತಮ್ಮ 41ನೇ ನಡೆಯಲ್ಲಿ ಮಾಡಿದ ಯಡವಟ್ಟನ್ನು ಬಳಸಿಕೊಂಡ ಪ್ರಗ್ನಾನಂದ್ ವಿಜಯ ಸಾಧಿಸಿದರು.
ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಟೂರ್ನಿಯಲ್ಲೂ ಕೂಡ ಪ್ರಗ್ನಾನಂದ ಅವರು ಕಾರ್ಲ್‌ಸನ್‌ರನ್ನು ಸೋಲಿಸಿದ್ದರು. ಮೂರು ತಿಂಗಳ ಅಂತರದ ಮತ್ತೊಂದು ಟೂರ್ನಿಯಲ್ಲಿ ಪ್ರಗ್ನಾನಂದ್ ವಿಶ್ವ ವಿಜೇತನ ವಿರುದ್ಧ ಮತ್ತೊಂದು ಗೆಲುವು ಕಂಡು ದಾಖಲೆ ಬರೆದಿದ್ದಾರೆ.
ಇನ್ನು ಟೂರ್ನಿಯ 2ನೇ ದಿನದ ನಂತರ ಕಾರ್ಲ್‌ಸನ್ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪ್ರಗ್ನಾನಂದ್ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಚೀನಾದ ವೈ ಯಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಡೇವಿಡ್ ಆಂಟನ್ 15 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಓದಿ:ಪೂರ್ವಜರ ಮನೆ ತೊರೆದು ₹40 ಕೋಟಿ ವೆಚ್ಚದ ಬಂಗಲೆಗೆ ಶೀಘ್ರವೇ 'ದಾದಾ' ಶಿಫ್ಟ್..