ಮಿಯಾಮಿ:ಕಳೆದ ಕೆಲ ವಾರಗಳ ಹಿಂದೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಇದೀಗ ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ಚೆಸ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಇಂದು ನಡೆದ ತಮ್ಮ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಲೆವೊನ್ ಆರೊನಿಯನ್ ವಿರುದ್ಧ 3-1 ಅಂತರದ ಗೆಲುವು ದಾಖಲು ಮಾಡಿದ್ದಾರೆ.
ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ಚೆಸ್ ಟೂರ್ನಿಯ ನಾಲ್ಕು ಸುತ್ತಿನ ಪಂದ್ಯಗಳ ಬಳಿಕ 12 ಪಾಯಿಂಟ್ ಗಳಿಕೆ ಮಾಡಿರುವ ಪ್ರಗ್ನಾನಂದ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಜೊತೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ಚೆಸ್ ಆಟಗಾರರು ಭಾಗಿಯಾಗಿದ್ದು, ಇನ್ನೂ ಮೂರು ಸುತ್ತು ಬಾಕಿ ಉಳಿದಿವೆ.