ನವದೆಹಲಿ: ವರ್ಷದ ಕೊನೆಯ, 108ನೇ 'ಮನ್ ಕಿ ಬಾತ್' ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಕೊಂಡಾಡಿದರು. 2023ರ ಏಷ್ಯಾನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ಮತ್ತು ವಿಶ್ವಕಪ್ ಕ್ರಿಕೆಟ್ನಲ್ಲಿ ತಂಡದ ಆಟದ ಬಗ್ಗೆ ಪ್ರಸ್ತಾಪಿಸಿ ಭಾರತೀಯ ಕ್ರೀಡಾಪಟುಗಳನ್ನು ಹೊಗಳಿದರು.
2023ರ ಏಷ್ಯಾಡ್ನಲ್ಲಿ ಭಾರತದ ಹಿಂದಿನ ದಾಖಲೆಯನ್ನು ಮುರಿದು ಸಾಧನೆ ಮಾಡಿದೆ. ಭಾರತವು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅಥ್ಲೀಟ್‌ಗಳು 111 ಪದಕ ಗೆದ್ದರು. ಏಷ್ಯನ್ ಗೇಮ್ಸ್‌ನಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚು ಸೇರಿ 107 ಪದಕ ಗಳಿಸಿ ಸಾಧನೆ ಮಾಡಿದರು. 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾಡ್ನಲ್ಲಿ 72 ಪದಕದ ಜಯ ಹಿಂದಿನ ಶ್ರೇಷ್ಠ ಸಾಧನೆ ಆಗಿತ್ತು. ಈ ಬಾರಿ ಏಷ್ಯನ್ ಗೇಮ್ಸ್ಗೆ ಪ್ರಯಾಣಿಸುವ ಮೊದಲು "ಅಬ್ ಕಿ ಬಾರ್, ಸೌ ಪಾರ್' (ಈ ಬಾರಿ 100 ಪದಕ) ಎಂಬ ಟ್ಯಾಗ್‌ಲೈನ್ ಜೊತೆಗೆ ತೆರಳಿದ ಅಥ್ಲೀಟ್‌ಗಳು ಅದನ್ನು ಸಾಧಿಸಿ ಮರಳಿದ್ದರು.
ಈ ವರ್ಷದ 'ಮನ್ ಕಿ ಬಾತ್' ಕಾರ್ಯಕ್ರಮದ ಅಂತಿಮ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2023ರಲ್ಲಿ ಕ್ರೀಡಾಪಟುಗಳಾಗಿ ದೇಶದ ಕ್ರೀಡೆಗಳಿಗೆ ಶುಭಕರವಾಗಿದೆ. ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ತಮ್ಮ ರೋಚಕ ಮತ್ತು ಐತಿಹಾಸಿಕ ಪ್ರದರ್ಶನಗಳ ಮೂಲಕ, ಹೆಚ್ಚಿನ ಕ್ರೀಡಾ ಸಾಧನೆಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ.