ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್ ಫೀಲ್ಡ್​ - ಟ್ರ್ಯಾಕ್​ನ ಟಾಪ್​ 10 ಮಾಂತ್ರಿಕ ಕ್ಷಣಗಳಲ್ಲಿ ನೀರಜ್​ ಚೋಪ್ರಾಗೆ ಸ್ಥಾನ - ಒಲಿಂಪಿಕ್ಸ್​ನ ಟಾಪ್​ 10 ಮಾಂತ್ರಿಕ ಕ್ಷಣಗಳು

23 ವರ್ಷದ ಚೋಪ್ರಾ ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಅಥ್ಲೀಟ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಜಾವಲಿನ್​ ಸ್ಪರ್ಧೆಯಲ್ಲಿ 87.58 ಮೀಟರ್​ ಎಸೆಯುವ ಮೂಲಕ ಫೀಲ್ಡ್​ ಮತ್ತು ಟ್ರ್ಯಾಕ್​ ವಿಭಾಗದಲ್ಲಿ 100 ವರ್ಷಗಳ ಭಾರತೀಯರ ಚಿನ್ನದ ಕನಸು ನನಸು ಮಾಡಿದ್ದರು.

10 magical moments of track and field in Olympics
ನೀರಜ್ ಚೋಪ್ರಾ

By

Published : Aug 11, 2021, 7:11 PM IST

ನವದೆಹಲಿ: ಭಾರತದ ಸ್ಟಾರ್​ ಜಾವಲಿನ್ ಥ್ರೋವರ್​ ನೀರಜ್ ಚೋಪ್ರಾ​ ಚಿನ್ನ ಗೆದ್ದ ಸಾಧನೆ ಟೋಕಿಯೋ ಒಲಿಂಪಿಕ್ಸ್​ನ ಫೀಲ್ಡ್​ ಅಂಡ್​ ಟ್ರ್ಯಾಕ್​​ನ 10 ಮಾಂತ್ರಿಕ ಕ್ಷಣಗಳಲ್ಲಿ ಒಂದಾಗಿ ವಿಶ್ವ ಅಥ್ಲೆಟಿಕ್ಸ್ ಹೆಸರಿಸಿದೆ.

23 ವರ್ಷದ ಚೋಪ್ರಾ ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಅಥ್ಲೀಟ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಜಾವಲಿನ್​ ಸ್ಪರ್ಧೆಯಲ್ಲಿ 87.58 ಮೀಟರ್​ ಎಸೆಯುವ ಮೂಲಕ ಫೀಲ್ಡ್​ ಮತ್ತು ಟ್ರ್ಯಾಕ್​ ವಿಭಾಗದಲ್ಲಿ 100 ವರ್ಷಗಳ ಭಾರತೀಯರ ಚಿನ್ನದ ಕನಸು ನನಸು ಮಾಡಿದ್ದರು.

ಒಲಿಂಪಿಕ್ ಕ್ರೀಡಾಕೂಟಕ್ಕೆ ಮುನ್ನ ಜಾವಲಿನ್​ ಕ್ರೀಡೆಗೆ ಇದ್ದ ಫಾಲೋವರ್ಸ್​ ಮಾತ್ರ ನೀರಜ್ ಚೋಪ್ರಾ ಬಗ್ಗೆ ತಿಳಿದಿದ್ದರು. ಆದರೆ, ಟೋಕಿಯೊದಲ್ಲಿ ಜಾವೆಲಿನ್ ಥ್ರೋದಲ್ಲಿ ಪದಕ ಗೆದ್ದ ನಂತರ ಮತ್ತು ಒಲಿಂಪಿಕ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ತಂದುಕೊಟ್ಟ ನಂತರ ಚೋಪ್ರಾ ಅವರ ಹೆಸರು ಗಗನಕ್ಕೇರಿದೆ "ಎಂದು ಜಾಗತಿಕ ಆಡಳಿತ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಇದಲ್ಲದೇ 23 ವರ್ಷದ ಚೋಪ್ರಾ ಒಲಿಂಪಿಕ್ಸ್‌ಗೆ ಮುನ್ನ ಇನ್​ಸ್ಟಾಗ್ರಾಮ್​ನಲ್ಲಿ 1,43,000 ಫಾಲೋವರ್ಸ್​ಗಳನ್ನು ಹೊಂದಿದ್ದರು ಎಂಬುದನ್ನು ವಿಶ್ವ ಅಥ್ಲೆಟಿಕ್ಸ್ ಒಕ್ಕೂಟ ಗಮನಿಸಿದೆ. ಆದರೆ, ಈಗ ಚೋಪ್ರಾ ಅವರ ಫಾಲೋವರ್ಸ್​ಗಳ ಸಂಖ್ಯೆ 34 ಲಕ್ಷಕ್ಕೆ ಏರಿಕೆಯಾಗುವ ಮೂಲಕ ದಿಗ್ಭ್ರಮೆಗೊಳಿಸುವಂತೆ ಮಾಡಿದೆ. ಇದೀ ನೀರಜ್​ ವಿಶ್ವದಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಇದನ್ನು ಓದಿ:ನೀರಜ್​ ಸಾಧನೆಯ ನೆನಪಿಗೆ ಆಗಸ್ಟ್​ 7ರಂದು ಜಾವಲಿನ್ ಥ್ರೋ ದಿನಾಚರಣೆಗೆ AFI ನಿರ್ಧಾರ

ABOUT THE AUTHOR

...view details