ಕರ್ನಾಟಕ

karnataka

ETV Bharat / sports

ವಿಶ್ವ ಚಾಂಪಿಯನ್​​ಶಿಪ್​​​: ಲಾಂಗ್​​ ಜಂಪ್​​ನಲ್ಲಿ ಮುರುಳಿ ಫೈನಲ್​ಗೆ.. ಈ ಸಾಧನೆ ಮಾಡಿದ ಮೊದಲ ಭಾರತೀಯ - ಲಾಂಗ್​​ ಜಂಪ್​​ನಲ್ಲಿ ಫೈನಲ್​ಗೆ ಅರ್ಹತೆ ಪಡೆದ ಮುರುಳಿ

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Murali Sreeshankar
Murali Sreeshankar

By

Published : Jul 16, 2022, 6:28 PM IST

ಯೂಜಿನ್​​(ಯುಎಸ್​​ಎ):ನಿನ್ನೆಯಿಂದ ಆರಂಭಗೊಂಡಿರುವ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​​ನಲ್ಲಿ ಭಾರತದ ಅನೇಕ ಅಥ್ಲೆಟ್ಸ್​​ಗಳು ಭಾಗಿಯಾಗಿದ್ದು, ತಮ್ಮ ಪ್ರದರ್ಶನ ಹೊರಹಾಕುತ್ತಿದ್ದಾರೆ. ಇದೀಗ ಪುರುಷರ ಲಾಂಗ್​​ ಜಂಪ್​​ನಲ್ಲಿ ಭಾರತದ ಮುರಳಿ ಶ್ರೀಶಂಕರ್​​ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜೊತೆಗೆ ಈ ಸಾಧನೆ ಮಾಡಿರುವ ಮೊದಲ ಭಾರತೀಯರಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ 8 ಮೀಟರ್​ ಜಿಗಿಯುವ ಮೂಲಕ ಕೇರಳದ 23 ವರ್ಷದ ಶ್ರೀಶಂಕರ್​​ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಸುತ್ತಿನಲ್ಲಿ ಜಪಾನ್‌ನ ಯುಕಿ ಹಶಿಯೋಕಾ (8.18 ಮೀ) ಮತ್ತು ಯುಎಸ್‌ಎಯ ಮಾರ್ಕ್ವಿಸ್ ಡೆಂಡಿ (8.16 ಮೀ) ಜಿಗಿದಿದ್ದಾರೆ. ಈ ಹಿಂದೆ ಭಾರತದ ಅಂಜು ಬಾಬಿ ಜಾರ್ಜ್​ ಲಾಂಗ್​ ಜಂಪ್ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದರು. ಇವರು 2003ರಲ್ಲಿ ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಮತ್ತೊಂದು ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್​​ ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್​​ ಚಾಂಪಿಯನ್​ಶಿಪ್​ನಲ್ಲಿ ಜಾವಲಿನ್​ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಭಾಗಿಯಾಗಿದ್ದು, ಚಿನ್ನಕ್ಕೆ ಮುತ್ತಿಕ್ಕುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿರಿ:'ವಾಟ್ ಇಫ್ ಐ ಫಾಲ್'?... ಸ್ಫೂರ್ತಿದಾಯಕ ಸಂದೇಶದೊಂದಿಗೆ ಫೋಟೋ ಹಂಚಿಕೊಂಡ ಕೊಹ್ಲಿ!

ಈಗಾಗಲೇ 8.36 ಮೀಟರ್ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ 23 ವರ್ಷದ ಲಾಂಗ್​ಜಂಪರ್​​ ಮುರಳು ಶ್ರೀಶಂಕರ್ ಕೂಡ ಈಗಾಗಲೇ ಫೈನಲ್​ ಪ್ರವೇಶ ಪಡೆದುಕೊಂಡಿದ್ದು, ಪದಕ ಗೆಲ್ಲುವ ಸಾಧ್ಯತೆ ಇದೆ. ಇನ್ನೂ ಭಾರತದ ಮತ್ತೋರ್ವ ಜಾವಲಿನ ಎಸೆತಗಾರ ರೋಹಿತ್ ಯಾದವ್​ ಸಹ ಸ್ಪರ್ಧೆಯಲ್ಲಿ ಇದ್ದಾರೆ. ಜುಲೈ 21ರಂದು ಅರ್ಹತಾ ಸುತ್ತು ನಡೆಯಲಿದೆ.

ABOUT THE AUTHOR

...view details