ಕರ್ನಾಟಕ

karnataka

ETV Bharat / sports

ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​: ಫೈನಲ್ ಪ್ರವೇಶಿಸಿ ಚಿನ್ನಕ್ಕ ಹತ್ತಿರವಾದ ಮೇರಿ ಕೋಮ್

ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಂಗೋಲಿಯಾದ ಲುಟ್ಸೈಖಾನ್​ ಅಲ್ಟಾಂಟ್ಸೆಗ್ ಅವರನ್ನು 4-1ರಲ್ಲಿ ಬಗ್ಗಬಡಿದು ಚಿನ್ನದ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೇರಿ ಕೋಮ್
ಮೇರಿ ಕೋಮ್

By

Published : May 27, 2021, 9:07 PM IST

ದುಬೈ: 6 ಬಾರಿಯ ವಿಶ್ವ ಚಾಂಪಿಯನ್​ ಎಂ ಸಿ ಮೇರಿ ಕೋಮ್​ (51ಕೆಜಿ) ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಂಗೋಲಿಯಾದ ಲುಟ್ಸೈಖಾನ್​ ಅಲ್ಟಾಂಟ್ಸೆಗ್ ಅವರನ್ನು 4-1ರಲ್ಲಿ ಬಗ್ಗಬಡಿದು ಚಿನ್ನದ ಸುತ್ತಿಗೆ ಪ್ರವೇಶಿಸಿದ್ದಾರೆ. ಅಗ್ರ ಶ್ರೇಯಾಂಕಿತೆ ಮೇರಿ ಕೋಮ್ ತನ್ನ ಅಪಾರ ಅನುಭವದಿಂದ ಅಲ್ಟಾಂಟ್ಸೆಗ್ ಅನ್ನು ವಿರುದ್ಧ ಬಲಗೈ ಪಂಚ್​ಗಳು ದಿನದ ವಿಶೇಷ ಕ್ಷಣವಾಗಿದ್ದವು. 38 ವರ್ಷದ ಇದೀಗ ಏಷ್ಯನ್ ಚಾಂಪಿಯನ್​ಸಿಪ್​ನಲ್ಲಿ 6ನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ, ಇದಕ್ಕೂ ಮುನ್ನ ನಡೆದ ಸೆಮಿಫೈನಲ್​ನಲ್ಲಿ ಮೋನಿಕಾ (48 ಕೆ.ಜಿ) ಕಜಕಿಸ್ತಾನದ ಎರಡನೇ ಶ್ರೇಯಾಂಕಿತ ಅಲುವಾ ಬಾಲ್ಕಿಬೆಕೊವಾ ವಿರುದ್ಧ 0-5ರಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಬುಧವಾರ ಒಲಿಂಪಿಕ್ಸ್ ಬೌಂಡ್​ ಆಶಿಷ್ ಕುಮಾರ್​(75ಕೆಜಿ) ಕ್ವಾರ್ಟರ್​ ಫೈನಲ್​ನಲ್ಲಿ ಕಜಕಿಸ್ತಾನದ ಏಷ್ಯನ್ ಗೇಮ್ ಬೆಳ್ಳಿ ಪದಕ ವಿಜೇತ ಅಬಿಲ್​ಖಾನ್ ವಿರುದ್ಧ 2-3ರಲ್ಲಿ ಸೋಲು ಕಂಡಿದ್ದರು. 91ಕೆಜಿ ವಿಭಾಗದಲ್ಲಿ ನರೇಂದರ್​​ 0-5ರ ಅಂತರದಲ್ಲಿ ಕಜಕಿಸ್ತಾನದ ಕಮ್ಶಿಬೆಕ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದರು.

ಇದನ್ನು ಓದಿ: ಏಷ್ಯನ್ ಚಾಂಪಿಯನ್​ಶಿಪ್​: ಸೆಮಿಫೈನಲ್​ಗೆ ಪಂಘಲ್ ವರೀಂದರ್​, ಭಾರತಕ್ಕೆ 14 ಪದಕ ಖಚಿತ

ABOUT THE AUTHOR

...view details