ಕರ್ನಾಟಕ

karnataka

ETV Bharat / sports

ಕಾರ್​ ರೇಸಿಂಗ್​ ಅಂತಾರಾಷ್ಟ್ರೀಯ ಚಾಂಪಿಯನ್​​​ ಪಟ್ಟಕ್ಕೇರಲು ಕೋಯಿಕ್ಕೋಡ್ ಯುವತಿ ಸಜ್ಜು...

F4 Car Racing Championship: ಪುರುಷರ ಪ್ರಾಬಲ್ಯದ ಕಾರ್​ ರೇಸಿಂಗ್​ನಲ್ಲಿ ಮಿಂಚು ಹರಿಸಲು ಕೇರಳದ ಯುವತಿ ಸಜ್ಜಾಗಿದ್ದಾರೆ. ಯಾರೀ ಗಟ್ಟಿಗಿತ್ತು.. ಇಲ್ಲಿ ಸಾಲ್ವಾ ಮಿಂಚಿನ ಸಂಚಾರದ ಹಿಸ್ಟರಿ...

Kozhikode based Salva Marjan is all set to become an international car racing champion
ಕಾರ್​ ರೇಸಿಂಗ್​ ಅಂತಾರಾಷ್ಟ್ರೀಯ ಚಾಂಪಿಯನ್ ಆಗಲು ಸಜ್ಜಾದ ಕೋಝಿಕ್ಕೋಡ್​ ಯುವತಿ ಸಾಲ್ವ

By ETV Bharat Karnataka Team

Published : Nov 2, 2023, 7:36 PM IST

ಕೋಯಿಕ್ಕೋಡ್​ (ಕೇರಳ): ಕೋಯಿಕ್ಕೋಡ್​ನ ಗುಡ್ಡಕಾಡು ಹಳ್ಳಿಯ ಯುವತಿಯೊಬ್ಬಳು ಫಾರ್ಮುಲಾ ಒನ್​ ಕಾರ್​ ರೇಸಿಂಗ್​ನಲ್ಲಿ ಅಂತಾರಾಷ್ಟ್ರೀಯ ಚಾಂಪಿಯನ್​ ಆಗಲು ತಯಾರಾಗಿದ್ದಾಳೆ. ಚಕ್ಕಿತ್ತಪರದ ಚೆಂಬ್ರಾ ಮೂಲದ ಸಾಲ್ವ ಮರ್ಜನ್​, ಬಹುತೇಕ ಪುರುಷ ಕ್ರೀಡಾಪಟುಗಳ ಪ್ರಾಬಲ್ಯವಿರುವ ಮೋಟಾರು ಕ್ರೀಡೆಗಳಲ್ಲಿ ಸಾಧನೆಯ ಪತಾಕೆಯನ್ನು ಹಾರಿಸಲು ಸಜ್ಜಾಗಿದ್ದಾರೆ.

ಕಾರ್​ ರೇಸಿಂಗ್​ ಅಂತಾರಾಷ್ಟ್ರೀಯ ಚಾಂಪಿಯನ್ ಆಗಲು ಸಜ್ಜಾದ ಕೋಯಿಕ್ಕೋಡ್​ ​ ಯುವತಿ ಸಾಲ್ವಾ

ನವೆಂಬರ್​ 4 ಹಾಗೂ 5 ರಂದು ಚೆನ್ನೈನಲ್ಲಿ ನಡೆಯಲಿರುವ ಎಫ್​4 ಕಾರ್​ ರೇಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಸರ್ಧಿಸಲು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. 23ರ ಹರೆಯದ ಯುವತಿ ಸಾಲ್ವ ಮರ್ಜನ್​ ಅತ್ಯಾಧುನಿಕ ಹ್ಯಾಲೊ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಚಾಂಪಿಯನ್​ಶಿಪ್​ಗೆ ಸಜ್ಜಾಗಿದ್ದಾರೆ. ಎಫ್​ ಫಾರ್​ ಯುಎಇ ಹಾಗೂ ಎಫ್​ ಫಾರ್​ ಬ್ರಿಟನ್​ ಚಾಂಪಿಯನ್​ಶಿಪ್​ಗಾಗಿ ದುಬೈನಲ್ಲಿ ತರಬೇತಿ ಪಡೆದು ಚೆನ್ನೈಗೆ ಬಂದಿರುವ ಸಾಲ್ವಾ ಭಾರತದ ಮೊದಲ ಅಂತಾರಾಷ್ಟ್ರೀಯ ರೇಸರ್​ ಆಗಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ.

ಚೆಂಬ್ರಾ ಪಣಜಿಂಗಲ್​ ಕುಂಜಾಮು ಹಾಗೂ ಸುಬೈದಾ ದಂಪತಿಯ ಪುತ್ರಿಯಾದ ಸಾಲ್ವ ಸಣ್ಣ ವಯಸ್ಸಿನಲ್ಲೇ ವಾಹನ ಚಾಲನೆಯಲ್ಲಿ ಆಸಕ್ತಿ ಹೊಂದಿದ್ದರು. ಅದೇ ಆಸಕ್ತಿಯನ್ನು ಕ್ರೀಡಾ ಕ್ಷೇತ್ರದಲ್ಲಿಯೂ ಮುಂದುವರಿಸಿದ್ದು, ಕಳೆದ 8 ವರ್ಷಗಳಿಂದ ರೇಸಿಂಗ್​ ಟ್ರ್ಯಾಕ್​ನಲ್ಲಿ ಚಾಂಪಿಯನ್​ ಆಗಲು ಶ್ರಮಿಸುತ್ತಿದ್ದಾರೆ. 8 ವರ್ಷಗಳ ಕನಸನ್ನು ನನಸು ಮಾಡಿಕೊಳ್ಲಲು ಇದೀಗ ಅವಕಾಶ ಒದಗಿ ಬಂದಿದ್ದು, ಈ ಪ್ರತಿಭೆಗೆ ಕುಟುಂಬದ ಪ್ರೋತ್ಸಾಹವೇ ಶಕ್ತಿಯಾಗಿದೆ.

ಕಾರ್​ ರೇಸಿಂಗ್​ ಅಂತಾರಾಷ್ಟ್ರೀಯ ಚಾಂಪಿಯನ್ ಆಗಲು ಸಜ್ಜಾದ ಕೋಯಿಕ್ಕೋಡ್​ ​ ಯುವತಿ ಸಾಲ್ವಾ

ಫಾರ್ಮುಲಾ ಎಲ್​ಜಿಬಿ, ಸಿಂಗಲ್​ ಸೀಟರ್​, ಡಿಟಿಎಸ್​ ರೇಸಿಂಗ್​ನಲ್ಲಿ ಓಪನ್​ ವ್ಹೀಲ್​ ಕ್ಲಾಸ್​ ರೇಸ್​ ಕಾರ್​ಗಳೊಂದಿಗೆ ತನ್ನ ರೇಸಿಂಗ್​ ಪ್ರಯಾಣ ಪ್ರಾರಂಭಿಸಿದ ಸಾಲ್ವಾ ಅವರ ಉತ್ಸಾಹ ಹಾಗೂ ಪ್ರತಿಭೆ ಈ ಕ್ಷೇತ್ರದಲ್ಲಿ ಅವರು ಮಿಂಚುವಂತೆ ಮಾಡಿದೆ. ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ ಅನ್ನು ತಮ್ಮ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿರುವ ಸಾಲ್ವಾ, ಭಾರತದ ಹೆಸರನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುವ ಕನಸು ಹೊಂದಿದ್ದಾರೆ. ಫಾರ್ಮುಲಾ ರೇಸಿಂಗ್​ನಲ್ಲಿ ಭಾರತವನ್ನು ಪ್ರತಿನಿಧಿಸುವ ತಮ್ಮ ಅಂತಿಮ ಗುರಿಯತ್ತ ಸಾಗಲು ಸತತ ಪ್ರಯತ್ನದಲ್ಲಿದ್ದಾರೆ ಸಾಲ್ವಾ. ಚೆನ್ನೈ ಎಫ್​4 ರೇಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಮೊದಲು ಅರ್ಹತಾ ವಿಭಾಗದಲ್ಲಿ ಭಾಗವಹಿಸಲಿದ್ದಾರೆ.

ಕಾರ್​ ರೇಸಿಂಗ್​ ಅಂತಾರಾಷ್ಟ್ರೀಯ ಚಾಂಪಿಯನ್ ಆಗಲು ಸಜ್ಜಾದ ಕೋಯಿಕ್ಕೋಡ್​ ​ ಯುವತಿ ಸಾಲ್ವಾ

ಈ ಫಾರ್ಮುಲಾ 4 ರೇಸ್​ನಲ್ಲಿ ಮೂರು ರೇಸ್​ಗಳಿರುತ್ತವೆ. ಎಲ್ಲ ಮೂರು ವಿಭಾಗಗಳು ಒಂದೇ ದೂರವನ್ನು ಹೊಂದಿರುತ್ತವೆ. ಫಾರ್ಮುಲಾ 3 ಹಾಗೂ ಫಾರ್ಮುಲಾ 2 ನಲ್ಲಿ ಇದು ಬದಲಾಗುತ್ತದೆ. ಎಫ್​4 ನಂತರ ಸಾಲ್ವ ಎಫ್​3 ಯಿಂದ ಎಫ್​2 ಹಾಗೂ ಅಂತಿಮವಾಗಿ ಎಫ್​1ಗೆ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಾರೆ. ಅದರಲ್ಲಿ ಸ್ಪರ್ಧಿಸಲು ಸಾಲ್ವಾ ಅವರು ಈ ರೇಸ್​ ಗೆಲ್ಲಬೇಕಾಗಿದೆ. ನಂತರ ಅವರು ಎಫ್​3, ಎಫ್​2 ನಂತರ ಎಫ್​1 ನಂತಹ ಉನ್ನತ ಹಂತಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಒಟ್ಟಿನಲ್ಲಿ ಪುರುಷರೇ ಮೇಲುಗೈ ಸಾಧಿಸಿರುವ ಈ ಕಾರ್​ ರೇಸ್​ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಚಾಂಪಿಯನ್​ ಆಗುವ ಕನಸಿನೊಂದಿಗೆ ರೇಸಿಂಗ್​ ಟ್ರ್ಯಾಕ್​ಗೆ ಇಳಿದಿರುವ ಸಾಲ್ವ ಮರ್ಜನ್​ ಅವರ ಯಶಸ್ಸಿಗೆ ಇಡೀ ಭಾರತವೇ ಹಾರೈಸುತ್ತಿದೆ.

ಇದನ್ನೂ ಓದಿ :ಇತಿಹಾಸ ನಿರ್ಮಿಸಿದ ವಂದನಾ ಕಟಾರಿಯಾ; 300 ಹಾಕಿ ಪಂದ್ಯ ಆಡಿದ ಮೊದಲ ಭಾರತೀಯ ಆಟಗಾರ್ತಿ

ABOUT THE AUTHOR

...view details