ನವದೆಹಲಿ :ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯ ಮಿಶ್ರ ತಂಡ ವಿಭಾಗದ 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ವಿಜಯವೀರ್ ಸಿಧು ಹಾಗೂ ತೇಜಸ್ವಿನಿ ಜೋಡಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕೂಟದಲ್ಲಿ ಭಾರತದ ಚಿನ್ನದ ಭೇಟೆ 13ಕ್ಕೇರಿದೆ.
ನವದೆಹಲಿ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್ಸ್ ಮುಖಾಮುಖಿಯಲ್ಲಿ 18 ವರ್ಷದ ವಿಜಯ್ವೀರ್ ಸಿಂಗ್ ಮತ್ತು 16 ವರ್ಷದ ತೇಜಶ್ವಿನಿ ಭಾರತದವರೇ ಆದ ಗುರುಪ್ರೀತ್ ಸಿಂಗ್ ಸಂಧು ಹಾಗೂ ಅಭಿಜ್ಞಾ ಅಶೋಕ ಪಾಟೀಲ್ ಅವರನ್ನು 9-1ರಲ್ಲಿ ಮಣಿಸಿದರು.
ಕಿನನ್ ಚೆನಾಯ್ ಮತ್ತು ಶ್ರೇಯಸಿ ಸಿಂಗ್ ಗುರುಪ್ರೀತ್ ಸಿಂಗ್ ಸಂಧು ಹಾಗೂ ಅಭಿಜ್ಞಾ ಅಶೋಕ ಪಾಟೀಲ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಭಾರತ ಒಟ್ಟಾರೆ ಟೂರ್ನಿಯಲ್ಲಿ 13 ಸ್ವರ್ಣ ಪದಕಗಳೊಂದಿಗೆ 27 ಪದಕ ಪಡೆದು ಅಗ್ರಸ್ಥಾನದಲ್ಲಿ ಪ್ರಾಬಲ್ಯ ಸಾಧಿಸಿದೆ.
ಕಿನನ್ ಚೆನಾಯ್ ಮತ್ತು ಶ್ರೇಯಸಿ ಸಿಂಗ್ಗೆ ಸೋಲು :ಮಿಕ್ಸಡ್ ಟ್ರಾಫ್ ಫೈನಲ್ ಸುತ್ತಿನಲ್ಲಿ ಟರ್ಕಿಯ ಸಫಿಯೆ ಸರಿಟರ್ಕ್ ಮತ್ತು ಯವುಜ್ ಇಲ್ನಮ್ ವಿರುದ್ಧ 35-38ರಿಂದ ಸೋಲು ಕಾಣುವು ಮೂಲಕ ಪೋಡಿಯಂ ಏರುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಈ ಜೋಡಿ 4ನೇ ಸ್ಥಾನ ಪಡೆದಿದೆ.
ಕಿನನ್ ನಿನ್ನೆ ನಡೆದಿದ್ದ ವೈಯಕ್ತಿಕ ವಿಭಾಗದ ಪುರುಷರ ಟ್ರಾಫ್ ಫೈನಲ್ನಲ್ಲೂ 4ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡಿದ್ದರು. ಇಂದಿನ ಸ್ಪರ್ಧೆಯಲ್ಲೂ ಕಿನನ್ ಮತ್ತು ಶ್ರೇಯಸಿ ಸಿಂಗ್ ಅವರ ಕೆಲವು ಶಾಟ್ಗಳು ಗುರಿ ತಲುಪುವಲ್ಲಿ ವಿಫಲವಾದವು.