ಹ್ಯಾಂಗ್ಝೌ (ಚೀನಾ):ಇಂದು (ಬುಧವಾರ) ಇಲ್ಲಿ ನಡೆದ ಏಷ್ಯನ್ ಗೇಮ್ಸ್ನ ಮಹಿಳೆಯರ 25 ಮೀ ರೈಫಲ್ ಸ್ಪರ್ಧೆಯಲ್ಲಿ ಭಾರತ ತಂಡದ ಸದಸ್ಯರಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಚಿನ್ನದ ಪದಕ ಗೆದ್ದರು. ಮನು, ಈಶಾ ಮತ್ತು ರಿದಮ್ ಒಟ್ಟು 1,759 ಅಂಕಗಳನ್ನು ಗಳಿಸಿದರು. ಏಷ್ಯನ್ ಗೇಮ್ಸ್ನಲ್ಲಿ ಭಾರತ ಈವರೆಗೆ ನಾಲ್ಕು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಚೀನಾದ ಆಟಗಾರರು 1,756 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ದಕ್ಷಿಣ ಕೊರಿಯಾದ ಶೂಟರ್ಗಳು ಒಟ್ಟು 1,742 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮಹಿಳೆಯರ 50 ಮೀಟರ್ ರೈಫಲ್ನಲ್ಲಿ ಭಾರತಕ್ಕೆ ಬೆಳ್ಳಿ: ಮಹಿಳೆಯರ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಮೂವರು ಶೂಟರ್ಗಳು ಬೆಳ್ಳಿ ಗೆದ್ದರು. ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಒಟ್ಟು 1,764 ಅಂಕಗಳನ್ನು ಗಳಿಸುವ ಮೂಲಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಆತಿಥೇಯ ಚೀನಾ 1,773 ಸ್ಕೋರ್ನೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1,756 ಸ್ಕೋರ್ನೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಇದನ್ನೂ ಓದಿ:ಏಷ್ಯನ್ ಗೇಮ್ಸ್: ಬೆಳ್ಳಿ ಪದಕ ಗೆದ್ದ ಭಾರತದ ಮಹಿಳೆಯರ 50 ಮೀಟರ್ ರೈಫಲ್ ತಂಡ