ಕನ್ಯಾಕುಮಾರಿ: ಸುಮಾರು ಒಂದೂವರೆ ತಿಂಗಳ ಹಿಂದೆ ಮನೆಯಿಂದ ಚಾರಿಟಿ ಮಿಷನ್ಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವೆಗೆ ಸೈಕಲ್ ಪಯಣವನ್ನು ಆದಿತ್ಯಾ ಮೆಹ್ತಾ ನೇತೃತ್ವದ ಪ್ಯಾರಾ ಸೈಕ್ಲಿಸ್ಟ್ಗಳ ತಂಡ ಯಶಸ್ವಿಯಾಗಿ ಮುಗಿಸಿದೆ.
ಚಾರಿಟಿ ಕಾರ್ಯಕ್ಕೆ ಹಣ ಸಂಗ್ರಹಿಸುವುದಕ್ಕಾಗಿ ಮತ್ತು ದೇಶದಾದ್ಯಂತ ಪ್ಯಾರಾ ಸ್ಪೋರ್ಟ್ಸ್ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರಯಾಣವನ್ನು ಆರಂಭಿಸಲಾಗಿತ್ತು. ಭಾರತಕ್ಕೆ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದುಕೊಟ್ಟಿರುವ ಪ್ಯಾರಾ ಸೈಕ್ಲಿಸ್ಟ್ ಆದಿತ್ಯ ಮೆಹ್ತಾ ಮತ್ತು ಅವರ ಸಹ ಪ್ಯಾರಾ ಸೈಕ್ಲಿಸ್ಟ್ಗಳು ಒಂದೂವರೆ ತಿಂಗಳ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ತುಳಿಯುವ ಸವಾಲು ಸ್ವೀಕರಿಸಿದ್ದರು. ಇಂದಿಗೆ ಅದು ಯಶಸ್ವಿಯಾಗಿ ಪೂರ್ಣಗೊಂಡಿದೆ.
ಆದಿತ್ಯ ಮಹ್ತಾ ಫೌಂಡೇಶನ್ನ' ಇನ್ಫಿನಿಟಿ ರೈಡ್ ಕೆ2ಕೆ' ಎಂಬ ಈ ದಂಡಯಾತ್ರೆ 45 ದಿನಗಳ ಪಯಣವಾಗಿದ್ದು, ಚಳಿ ಮಳೆಯನ್ನೆಲ್ಲಾ ಸೋಲಿಸಿ ಕಷ್ಟಕರವಾದ ರಸ್ತೆಗಳ ಮೂಲಕ ಕೋವಿಡ್ 19 ಸಾಂಕ್ರಾಮಿಕದ ಸವಾಲಿನ ಸಂದರ್ಭಗಳ ನಡುವೆಯೂ ಈ 30 ಸದಸ್ಯರ ತಂಡ ತಮ್ಮ ಪಯಣವನ್ನು ಮುಗಿಸಿ ಗುರುವಾರ ತಮ್ಮ ಗುರಿಯಾದ ಕನ್ಯಕುಮಾರಿಗೆ ಬಂದು ತಲುಪಿದೆ.