ಕರ್ನಾಟಕ

karnataka

ETV Bharat / sports

ಚೆಸ್​ ಟೂರ್ನಿ: ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿದ ಭಾರತದ ಗ್ರ್ಯಾಂಡ್​ಮಾಸ್ಟರ್​ಗಳು - ಭಾರತದ ಗ್ರ್ಯಾಂಡ್​ಮಾಸ್ಟರ್​ಗಳ ಪರಾಕ್ರಮ

ಚದುರಂಗದಾಟದಲ್ಲಿ ಭಾರತದ ಇಬ್ಬರು ಗ್ಯ್ರಾಂಡ್​ಮಾಸ್ಟರ್​ಗಳ ವಿರುದ್ಧ ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್​ ಕಾರ್ಲ್​ಸನ್​ ಮಂಡಿಯೂರಿದ್ದಾರೆ.

indian-grandmasters-beat-magnus-carlsen
ಭಾರತದ ಗ್ರ್ಯಾಂಡ್​ಮಾಸ್ಟರ್​ಗಳ ವಿರುದ್ಧ ವಿಶ್ವ ನಂ.1 ಕಾರ್ಲ್​ಸನ್​ಗೆ ಸೋಲು

By

Published : Oct 17, 2022, 10:38 AM IST

ಚದುರಂಗದಾಟದಲ್ಲಿ ಭಾರತೀಯರ ಬುದ್ಧಿಪರಾಕ್ರಮಕ್ಕೆ ಸಾಟಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. 5 ಬಾರಿಯ ವಿಶ್ವಚಾಂಪಿಯನ್​, ವಿಶ್ವ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್​ ಕಾರ್ಲಸನ್​ ಅವರು ಭಾರತ ಕಿರಿಯ ಆಟಗಾರರ ವಿರುದ್ಧ 2 ಬಾರಿ ಪರಾಭವಗೊಂಡಿದ್ದಾರೆ. ಐಮ್‌ಚೆಸ್ ರಾಪಿಡ್ ಆನ್‌ಲೈನ್ ಪಂದ್ಯಾವಳಿಯ 7 ನೇ ಸುತ್ತಿನಲ್ಲಿ ಭಾರತದ ಅರ್ಜುನ್ ಎರಿಗೈಸಿ ವಿರುದ್ಧ ಸೋತರೆ, 9 ನೇ ಸುತ್ತಿನಲ್ಲಿ ಡೊನ್ನಾರುಮ್ಮ ಗುಕೇಶ್ ವಿರುದ್ಧ ಮಂಡಿಯೂರಿದರು.

ಇದೇ ವರ್ಷದ 6 ತಿಂಗಳ ಅಂತರದಲ್ಲಿ 3 ಸಲ ನಾರ್ವೆಯ ಮ್ಯಾಗ್ನಸ್​ ಕಾರ್ಲ್‌ಸನ್​ಗೆ ತಮಿಳುನಾಡಿನ​ ಜೂನಿಯರ್​ ಗ್ರ್ಯಾಂಡ್​ಮಾಸ್ಟರ್​ ಆರ್​ ಪ್ರಗ್ನಾನಂದ್​ ಸೋಲಿನ ಕಹಿ ತೋರಿಸಿದ್ದರು. ಇದೀಗ ಮತ್ತಿಬ್ಬರು ಭಾರತೀಯ ಗ್ರ್ಯಾಂಡ್​ಮಾಸ್ಟರ್​ಗಳು ವಿಶ್ವ ನಂ.1 ಆಟಗಾರನನ್ನು ಮಣಿಸಿದ್ದಾರೆ. ಭಾನುವಾರ ನಡೆದ ಟೂರ್ನಿಯ 7ನೇ ಸುತ್ತಿನ ಪಂದ್ಯದಲ್ಲಿ 19 ವರ್ಷದ ಅರ್ಜುನ್​ ಎರಿಗೈಸಿ ಕಾರ್ಲ್​ಸನ್​ರನ್ನು ಸೋಲಿಸಿದರು. ಕಳೆದ ತಿಂಗಳು ಜ್ಯೂಲಿಯಸ್​ ಬೇರ್​ ಆನ್​ಲೈನ್​ ಟೂರ್ನಿಯಲ್ಲಿ ಕಾರ್ಲ್​ಸನ್​ ವಿರುದ್ಧ ಸೋತಿದ್ದರು.

ಬಳಿಕ ನಡೆದ 9ನೇ ಸುತ್ತಿನ ಪಂದ್ಯದಲ್ಲಿ ಭಾರತದ ಇನ್ನೊಬ್ಬ ಗ್ರ್ಯಾಂಡ್​ಮಾಸ್ಟರ್​ 16 ವರ್ಷದ ಡೊನ್ನಾರುಮ್ಮ ಗುಕೇಶ್ ಅವರು ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧವೇ ಕಣಕ್ಕಿಳಿದು ಜಯಿಸಿದರು. ಈ ಮೂಲಕ ವಿಶ್ವಚಾಂಪಿಯನ್​ರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದರು.

ಓದಿ:ಬಾಲಕನ ಪ್ರತಿಭೆಗೆ ರೋಹಿತ್ ಶರ್ಮಾ ಫಿದಾ... ಅಭ್ಯಾಸದ ವೇಳೆ ಕರೆದು ಬೌಲಿಂಗ್ ಮಾಡಿಸಿಕೊಂಡ ಕ್ಯಾಫ್ಟನ್

ABOUT THE AUTHOR

...view details