ಕರ್ನಾಟಕ

karnataka

ETV Bharat / sports

2 ಡಬ್ಲ್ಯೂಬಿಸಿ ಪ್ರಶಸ್ತಿಗೆ ಪಂಚ್​ ಮಾಡಿದ ಭಾರತದ ಬಾಕ್ಸರ್​ ಊರ್ವಶಿ ಸಿಂಗ್​

ಕೊಲಂಬೋದಲ್ಲಿ ನಡೆದ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಪಾರಮ್ಯ ಮೆರೆದ ಭಾರತದ ಬಾಕ್ಸರ್​ ಊರ್ವಶಿ ಸಿಂಗ್​ ಎರಡು ಡಬ್ಲ್ಯೂಬಿಸಿ ಪ್ರಶಸ್ತಿಗಳನ್ನು ಬಾಚಿಕೊಂಡರು.

indian-boxer-urvashi-singh
ಭಾರತದ ಬಾಕ್ಸರ್​ ಊರ್ವಸಿ ಸಿಂಗ್​

By

Published : Nov 28, 2022, 6:52 PM IST

ನವ ದೆಹಲಿ:ಕೊಲಂಬೋದಲ್ಲಿ ನಡೆದ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಬಾಕ್ಸರ್​ ಊರ್ವಶಿ ಸಿಂಗ್​ ಥಾಯ್ಲೆಂಡ್​​ನ ಚಾಂಪಿಯನ್​ ಥಾಂಚನೋಕ್​ ಫನಾನ್​ರಿಗೆ ಪಂಚ್​ ನೀಡಿ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಅಲ್ಲದೇ ಏಷ್ಯಾ ಬೆಳ್ಳಿ ಪದಕಕ್ಕೂ ಕೊರಳೊಡ್ಡಿದರು.

ಥಾಯ್ಲೆಂಡ್​ನ ಥಾಂಚನೋಕ್​ ಫನಾನ್​ ಅವರು ಊರ್ವಶಿಗೆ ಸವಾಲಾದರೂ, ಭಾರತೀಯ ಆಟಗಾರ್ತಿಯ ಕೌಶಲ್ಯ, ವೇಗ, ಶಕ್ತಿಯ ಮುಂದೆ ಶರಣಾಗಬೇಕಾಯಿತು. 10 ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಊರ್ವಶಿ ಸಿಂಗ್​ 10-3 ಅಂಕಗಳಿಂದ ಥಾಯ್ಲೆಂಡ್​ ಆಟಗಾರ್ತಿಯ ವಿರುದ್ಧ ಗೆದ್ದರು.

ಮೊದಲ ಮೂರು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಥಾಯ್ಲೆಂಡ್​ ಆಟಗಾರ್ತಿಯ ತಂತ್ರಗಳನ್ನು ಅರಿತ ಊರ್ವಶಿ ಸಿಂಗ್ ಬಳಿಕ ಸಿಡಿದೆದ್ದು, ಮುಂದಿನ ಎಲ್ಲ ಸುತ್ತುಗಳಲ್ಲಿ ಹಿಡಿತ ಸಾಧಿಸಿದರು. ವೇಗ ಮತ್ತು ಉತ್ತಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ, ಅಂತಿಮವಾಗಿ ಪ್ರಶಸ್ತಿಗೆ ಕೊರಳೊಡ್ಡಿದರು.

ಇದನ್ನೂ ಓದಿ:'ಸಂಜು ಸ್ಯಾಮ್ಸನ್‌ ನಿಮ್‌ ಜೊತೆ ನಾವಿದ್ದೀವಿ..' ಕತಾರ್​ ಫಿಫಾ ವಿಶ್ವಕಪ್​ನಲ್ಲಿ ಅಭಿಮಾನಿಗಳ ಬೆಂಬಲ

ABOUT THE AUTHOR

...view details