ಹ್ಯಾಂಗ್‌ಝೌ:ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ಗುರಿಕಾರರ ಚಿನ್ನದ ಬೇಟೆ ಮುಂದುವರಿದಿದೆ. ಮಹಿಳಾ ಆರ್ಚರಿ ತಂಡವು ಚಿನ್ನದ ಪದಕ ಗೆದ್ದ ಬೆನ್ನಲ್ಲೇ, ಪುರುಷರ ತಂಡವೂ ಚಿನ್ನದ ಸಾಧನೆ ಮಾಡಿದ್ದು, ಕೂಟದಲ್ಲಿ 21 ನೇ ಬಂಗಾರದ ಪದಕ ಭಾರತದ ಮುಡಿಗೇರಿದೆ.
ಇಂದು ನಡೆದ ಫೈನಲ್‌ನಲ್ಲಿ ಕೊರಿಯಾ ತಂಡವನ್ನು ಸೋಲಿಸಿದ ಅಭಿಷೇಕ್, ಓಜಸ್ ಮತ್ತು ಪ್ರಥಮೇಶ್ ಗುರಿಕಾರರ ತಂಡವು ಭಾರತಕ್ಕೆ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ತಂದುಕೊಟ್ಟರು. ಕೊರಿಯಾ ಗುರಿಕಾರರು 230 ಅಂಕ ಗಳಿಸಿದರೆ, ಭಾರತ ತಂಡ 235 ಅಂಕ ಸಂಪಾದಿಸಿತು. ಈವರೆಗೂ ಭಾರತ ಒಂದೇ ದಿನದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆಯಿತು.
ನಾಲ್ಕೂ ಸುತ್ತಲ್ಲೂ ಅಧಿಪತ್ಯ:ಕೊರಿಯಾ ತಂಡದೆದುರು ಮೊದಲ ಸುತ್ತಿನಿಂತಲೂ ಅಧಿಪತ್ಯ ಸಾಧಿಸಿದ ಭಾರತದ ಗುರಿಕಾರರು, 58-55 ಅಂಕಗಳಿಂದ ಮುನ್ನಡೆ ಸಾಧಿಸಿದರು. ಅಭಿಷೇಕ್, ಓಜಸ್ ಮತ್ತು ಪ್ರಥಮೇಶ್ ಬಾಣವನ್ನು ನಿಖರ ಲ್ಯಾಂಡ್ ಮಾಡಿದರು. ಕೊರಿಯನ್ನು ಮೂರು ಬಾರಿ ಮಾತ್ರ 9 ಅಂಕಗಳನ್ನು ಗಳಿಸಿದರು. ಬಳಿಕ ಎರಡನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಬಿಲ್ಲುಗಾರರು ತುಸು ಪ್ರತಿರೋಧ ಒಡ್ಡಿದರು. ಇದರಿಂದ 116-114 ಅಂಕಗಳು ದಾಖಲಾದವು. ಭಾರತ ತಂಡ ಕೇವಲ 2 ಅಂಕ ಮಾತ್ರ ಮುನ್ನಡೆ ಸಾಧಿಸಿತು.
ಮೂರನೇ ಸುತ್ತಿನಲ್ಲಿ ಭಾರತೀಯರು ಕೊರಿಯಾವನ್ನು ಮೆಟ್ಟಿ ಬೆರಗುಗೊಳಿಸುವ ಪ್ರದರ್ಶನ ನೀಡಿದರು. ಸ್ಕೋರ್ಬೋರ್ಡ್ನಲ್ಲಿ ಭಾರತ ಪಡೆಗೆ 175 ಅಂಕ ಪಡೆದರೆ, ಕೊರಿಯಾ ಬಿಲ್ಲುಗಾರರು 170 ರಲ್ಲಿ ಸಾಗಿದರು. ಇದರಿಂದ 5 ಅಂಕಗಳ ಮುನ್ನಡೆ ಸಿಕ್ಕಿತು. ಕೊನೆಯ ಸುತ್ತಿನಲ್ಲೂ ಪ್ರಾಬಲ್ಯ ಮುಂದುವರಿಸಿದ ಅಭಿಷೇಕ್, ಓಜಸ್ ಮತ್ತು ಪ್ರಥಮೇಶ್ ಭಾರತ ತಂಡವು 235 ಅಂಕಗಳಿಗೆ ಹೆಚ್ಚಿಸಿಕೊಂಡಿತು. ಅತ್ತ ಕೊನೆಯ ಸುತ್ತಿನಲ್ಲಿ ಗೆಲ್ಲಲೇಬೇಕೆಂದು ಗುರಿ ಒಡ್ಡಿದ್ದ ಕೊರಿಯಾದ ಜೂ ಜೇಹೂನ್, ಯಾಂಗ್ ಜಾವೊನ್ ಮತ್ತು ಕಿಮ್ ಜೊಂಘೋ ತಂಡವು 230 ಅಂಕಗಳೊಂದಿಗೆ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿತು.
ಆರ್ಚರಿಯಲ್ಲಿ 2ನೇ ಚಿನ್ನ:ಇಂದು ಬೆಳಗ್ಗೆಯಷ್ಟೇ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರಿದ್ದ ಮಹಿಳಾ ಆರ್ಚರಿ ತಂಡ ಚೈನೀಸ್ ತೈಪೆ (ತೈವಾನ್) ತಂಡವನ್ನು ಫೈನಲ್‌ನಲ್ಲಿ ಮಣಿಸಿ ಚಿನ್ನ ಪದಕಕ್ಕೆ ಮುತ್ತಿಟ್ಟಿತ್ತು. ಜ್ಯೋತಿ, ಅದಿತಿ ಮತ್ತು ಪರ್ನೀತ್ ಒಟ್ಟಾಗಿ 230 ಅಂಕಗಳನ್ನು ಗಳಿಸಿದರೆ, ಎದುರಾಳಿಗಳು 229 ಅಂಕಗಳನ್ನು ಗಳಿಸಿದರು.
ಇದನ್ನೂ ಓದಿ:ಏಷ್ಯನ್ ಗೇಮ್ಸ್ 2023: ಮಹಿಳಾ ಆರ್ಚರಿ, ಸ್ಕ್ವಾಷ್ ಮಿಶ್ರ ಡಬಲ್ಸ್ನಲ್ಲಿ ಭಾರತದ ಮುಡಿಗೇರಿದ ಸ್ವರ್ಣ ಪದಕ...