ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದಾದ್ಯಂತ ಮನೆಮಾತಾಗಿರುವ ಮೀರಾಬಾಯಿ ಚನು ಅವರಿಗೆ ಡೊಮಿನೊಸ್ ಕಂಪನಿ ಜೀವನಪೂರ್ತಿ ಪಿಜ್ಜಾವನ್ನು ಉಚಿತವಾಗಿ ನೀಡಲಿದೆ.
ಕಳೆದ ನಾಲ್ಕ ವರ್ಷಗಳಿಂದ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದಕ್ಕಾಗಿ ಡಯಟ್ಗೆ ಹೊಂದಿಕೊಂಡಿರುವ ಮೀರಾಬಾಯಿ ಪದಕ ಗೆದ್ದ ನಂತರ ತಾವು ಯಾವ ತಿನಿಸು ತಿನ್ನಲು ಕಾಯುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಪಿಜ್ಜಾ ತಿನ್ನುವುದಕ್ಕೆ ಕಾಯುತ್ತಿದ್ದೇನೆ ಎಂದಿದ್ದರು.
ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕೆಂಬ ಕನಸು ನನಸಾಗಿದೆ. ಹಾಗಾಗಿ ನನಗಿಷ್ಟವಾದ ಪಿಜ್ಜಾವನ್ನು ಎಷ್ಟು ಬೇಕೋ ಅಷ್ಟನ್ನು ತಿನ್ನುತ್ತೇನೆ ಎಂದು ಮುಗ್ದವಾಗಿ ಅವರು ಹೇಳಿಕೊಂಡಿದ್ದರು. ಈ ಸಂದರ್ಶನದ ವಿಡಿಯೋ ವೈರಲ್ ಆದ ನಂತರ ಡೊಮಿನೊಸ್ ಇಂಡಿಯಾ ಮೀರಾ ಅವರಿಗೆ ಉಚಿತ ಜೀವನಪೂರ್ತಿ ಪಿಜ್ಜಾ ನೀಡುವುದಾಗಿ ತಿಳಿಸಿದೆ.