ಕರ್ನಾಟಕ

karnataka

ETV Bharat / sports

ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯಲ್ಲಿ ಜೊಕೊವಿಕ್ ಭಾಗವಹಿಸುವುದು ಇನ್ನೂ ಅನುಮಾನ

ಸೆರ್ಬಿಯನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅಮೆರಿಕದಲ್ಲಿ ನಡೆಯುವ ಬಿಎನ್​ಪಿ ಪರಿಬಾಸ್ ಓಪನ್​ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕಾದರೆ, ಕೋವಿಡ್ ವ್ಯಾಕ್ಸಿನೇಷನ್ ಕಡ್ಡಾಯವಾಗಿದ್ದು, ಈ ಟೂರ್ನಿಯಲ್ಲಿಯೂ ಭಾಗವಹಿಸುವುದು ಅನುಮಾನವಾಗಿದೆ.

djokovic-in-draw-at-indian-wells-status-still-up-in-air
ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯಲ್ಲಿ ಜೊಕೊವಿಕ್ ಭಾಗವಹಿಸುವುದು ಇನ್ನೂ ಅನುಮಾನ

By

Published : Mar 9, 2022, 4:58 PM IST

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಗುಳಿದಿದ್ದ ಸೆರ್ಬಿಯನ್ ಆಟಗಾರ ನೊವಾಕ್ ಜೊಕೊವಿಕ್ ಅವರ ಹೆಸರು ಬಿಎನ್​ಪಿ ಪರಿಬಾಸ್ ಓಪನ್​ ಕ್ರೀಡಾಕೂಟದ ಎಂಟ್ರಿ ಲಿಸ್ಟ್​ನಲ್ಲಿದ್ದು, ಅವರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆಯೇ ಅಥವಾ ಅಮೆರಿಕ ಅಮೆರಿಕ ನೊವಾಕ್ ಜೊಕೊವಿಕ್ ಅವರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಂಡಿಯನ್ ವೆಲ್ಸ್​ ಮಾಸ್ಟರ್ಸ್ ಎಂದೂ ಈ ಕ್ರೀಡಾಕೂಟವನ್ನು ಕರೆಯಾಗುತ್ತದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಲಸಿಕೆ ಕಡ್ಡಾಯ ಎಂದು ಅಮೆರಿಕ ಆದೇಶ ನೀಡಿತ್ತು. ಆದ್ದರಿಂದ ಅವರ ಹೆಸರನ್ನು ಪಟ್ಟಿಯಿಂದ ಹಿಂಪಡೆಯುವುದಾಗಿ ಹೇಳಲಾಗಿತ್ತು. ಆದರೂ ಅವರ ಹೆಸರು ಪುರುಷರ ಸಿಂಗಲ್ಸ್​ ಪಟ್ಟಿಯಲ್ಲಿ ಮುಂದುವರೆದಿದೆ. ಆದರೆ ನೊವಾಕ್ ಜೊಕೊವಿಕ್ ಈ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:ಐಸಿಸಿಯ 'ತಿಂಗಳ ಆಟಗಾರ ಪ್ರಶಸ್ತಿ'ಗೆ ಶ್ರೇಯಸ್, ಮಿಥಾಲಿ, ದೀಪ್ತಿ ನಾಮನಿರ್ದೇಶನ

ನಾವು ಪ್ರಸ್ತುತ ಅವರೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಅವರು ಟೂರ್ನಿಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ಪ್ರವೇಶಿಸಲು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್​ನ ಅನುಮೋದನೆ ಪಡೆಯಬೇಕಾಗುತ್ತದೆ. ಅವರು ಅನುಮತಿ ಪಡೆದು ಟೂರ್ನಿಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಟೂರ್ನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಇಂಡಿಯನ್ ವೆಲ್ಸ್​ ಮಾಸ್ಟರ್ಸ್​ ನಡೆಯುವ ಕ್ರೀಡಾಂಗಣದ ಗೋಡೆಗಳ ಮೇಲೆ ಜೊಕೊವಿಕ್ ಭಾವಚಿತ್ರದೊಂದಿಗೆ 'ವಿ ಮಿಸ್ ಯೂ' ಎಂಬ ಬರಹಗಳು ಕಾಣಿಸಿಕೊಂಡಿದ್ದು, ಅವರು ಈ ಟೂರ್ನಿಯಲ್ಲೂ ಭಾಗವಹಿಸುವುದಿಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿವೆ.

ಈಗಾಗಲೇ ಇಂಡಿಯನ್ ವೆಲ್ಸ್​ ಮಾಸ್ಟರ್ಸ್ ಟೂರ್ನಿ ಆರಂಭವಾಗಿದ್ದು, ನೊವಾಕ್ ಜೊಕೊವಿಕ್ ಅವರ ಪಂದ್ಯ ಮಾರ್ಚ್ 13ರಂದು ನಿಗದಿಯಾಗಿದೆ. ಅವರು ಅನುಮತಿ ಪಡೆದರೆ, ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ.

ABOUT THE AUTHOR

...view details