ಕರ್ನಾಟಕ

karnataka

ETV Bharat / sports

CWG 2022: 10,000 ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ - ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ

Commonwealth Games 2022: ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ದಕ್ಕಿದೆ. 10 ಸಾವಿರ ಮೀಟರ್​ ಓಟದ ನಡಿಗೆ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕಾ ಮಹತ್ವದ ಸಾಧನೆ ಮಾಡಿದ್ದಾರೆ.

Priyanka Goswami won silver medal
Priyanka Goswami won silver medal

By

Published : Aug 6, 2022, 4:50 PM IST

ಬರ್ಮಿಂಗ್​ಹ್ಯಾಮ್​​:ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಇಂದು ನಡೆದ 10,000 ಕಿ.ಮೀ ಓಟದ ನಡಿಗೆಯಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದು, ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಭಾರತದ ಅವಿನಾಶ್ ಕೂಡ ಬೆಳ್ಳಿಗೆ ಕೊರಳೊಡ್ಡಿದ್ದಾರೆ.

2022ರ ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಟ್ರ್ಯಾಕ್​​ ಮತ್ತು ಫೀಲ್ಡ್​​ನಲ್ಲಿ ಮೊದಲ ಪದಕ ಗೆದ್ದಿರುವ ಭಾರತದ ಮಹಿಳಾ ಆಟಗಾರ್ತಿಯಾಗಿ ಪ್ರಿಯಾಂಕಾ ಹೊರಹೊಮ್ಮಿದ್ದಾರೆ. ಈಗಾಗಲೇ ಟ್ರ್ಯಾಕ್​ ಮತ್ತು ಫೀಲ್ಡ್​​ನಲ್ಲಿ ಭಾರತದ ಮುರುಳಿ ಶ್ರೀಶಂಕರ್​(ಲಾಂಗ್​ಜಂಪ್​), ತೇಜಸ್ವಿನ್ ಶಂಕರ್​(ಹೈಂಜಪ್​​) ಪದಕ ಗೆದ್ದಿದ್ದಾರೆ. ಆದರೆ, ಪ್ರಿಯಾಂಕಾ ಗೋಸ್ವಾಮಿ ಇದೀಗ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮಹಿಳೆಯರ 10,000 ಮೀಟರ್ ನಡಿಗೆಯನ್ನು ಪ್ರಿಯಾಂಕಾ ಕೇವಲ 49 ನಿಮಿಷ, 38 ಸೆಕೆಂಡ್​​​ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನ ಟ್ರ್ಯಾಕ್​ ಮತ್ತು ಫೀಲ್ಡ್​ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ 3 ಸಾವಿರ ಮೀಟರ್ ಸ್ಟೀಪಲ್​ ಚೇಸ್​ ಫೈನಲ್​ನಲ್ಲಿ ಭಾರತದ ಅವಿನಾಶ್ ಮುಕುಂದ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಬಾಕ್ಸಿಂಗ್ ಹಾಗೂ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಇನ್ನಷ್ಟು ಪದಕ ಬರುವುದು ಖಚಿತವಾಗಿದೆ. ಈಗಾಗಲೇ ಅಮಿತ್, ನೀತು​ ಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಇಲ್ಲಿಯವರೆಗೆ 9 ಚಿನ್ನ, 10 ಬೆಳ್ಳಿ ಹಾಗೂ 9 ಕಂಚಿನ ಸಾಧನೆ ಮಾಡಿದ್ದು, ಒಟ್ಟು 28 ಪದಕ ಮುಡಿಗೇರಿಸಿಕೊಂಡು ಭಾರತ 5ನೇ ಸ್ಥಾನದಲ್ಲಿದೆ. 52 ಚಿನ್ನ, 44 ಬೆಳ್ಳಿ ಹಾಗೂ 46 ಕಂಚು ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿರಿ:ಕಾಮನ್ ವೆಲ್ತ್ ಗೇಮ್ಸ್: ಪದಕ ಗೆದ್ದು ತವರಿಗೆ ಮರಳಿದ ಕ್ರೀಡಾಪಟುಗಳಿಗೆ ಅದ್ಧೂರಿ ಸ್ವಾಗತ

ABOUT THE AUTHOR

...view details