ಮನಿಲಾ(ಫಿಲಿಫೈನ್ಸ್) : ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ ವಿ ಸಿಂಧು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ನಲ್ಲಿ ಸೆಮಿಫೈನಲ್ನಲ್ಲಿ ಜಪಾನ್ನ ಅಕಾನೆ ಯಮಗುಚಿ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು 3 ಗೇಮ್ಗಳ ಪಂದ್ಯದಲ್ಲಿ 21-13 19-21, 16-21ರ ಅಂತರದಲ್ಲಿ ಸೋಲು ಕಂಡರು. ಮೊದಲ ಗೇಮ್ನಲ್ಲಿ ಉತ್ತಮ ಪ್ರದರ್ಶನ ತೋರಿ ಗೆದ್ದ ಸಿಂಧು 2ನೇ ಗೇಮ್ನಲ್ಲಿ ರೋಚಕ ಸೋಲು ಕಂಡರು. ಆದರೆ ಮೂರನೇ ಗೇಮ್ನಲ್ಲಿ ಜಪಾನ್ ಆಟಗಾರ್ತಿ ಮೇಲುಗೈ ಸಾಧಿಸಿ ಫೈನಲ್ ಪ್ರವೇಶಿಸಿದರು. ಈ ಟೂರ್ನಮೆಂಟ್ನಲ್ಲಿ ಸಿಂಧು ಪಡೆದ 2ನೇ ಪದಕ ಇದಾಗಿದೆ. 2014 ರ ಆವೃತ್ತಿಯಲ್ಲಿ ಸಿಂಧು ಕಂಚಿನ ಪದಕ ಪಡೆದಿದ್ದರು.