ಮೆಲ್ಬೋರ್ನ್: ವಿಶ್ವದ 2ನೇ ಶ್ರೇಯಾಂಕದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21 ವರ್ಷದ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್ ವಿರುದ್ಧ 5 ಸೆಟ್ಗಳ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ನೊವಾಕ್ ಜೊಕೊವಿಕ್ ಅನುಪಸ್ಥಿತಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಮೆಡ್ವೆಡೆವ್ ಕೆನಡಾದ 9ನೇ ಶ್ರೇಯಾಂಕದ ಆಟಗಾರನ ವಿರುದ್ಧ 6-7,3-6,7-6. 7-5, 6-4ರ ಮ್ಯಾರಥಾನ್ ಪಂದ್ಯದಲ್ಲಿ ಗೆದ್ದು ಬೀಗಿದರು.
ರೋಡ್ ಲೇವರ್ ಅರೇನಾದಲ್ಲಿ ಮೊದಲೆರಡು ಸೆಟ್ಗಳಲ್ಲಿ ಯುವ ಆಟಗಾರ ವಿರುದ್ಧ ಸೋಲು ಕಂಡ ಮೆಡ್ವೆಡೆವ್ 3ನೇ ಸೆಟ್ನಲ್ಲಿ ಪ್ರಬಲ ಹೋರಾಟ ನಡೆಸಿ ಟೈ ಬ್ರೇಕರ್ನಲ್ಲಿ ಗೆಲುವು ಸಾಧಿಸಿದರು. 4ನೇ ಸೆಟ್ಅನ್ನು 7-5ರಿಂದ ಗೆದ್ದ ರಷ್ಯನ್ ಸ್ಟಾರ್ ಕೊನೆಯ ಸೆಟ್ನಲ್ಲಿ ಮೊದಲ ಗೇಮ್ನಲ್ಲೇ ಫೆಲಿಕ್ಸ್ರ ಸರ್ವ್ ಬ್ರೇಕ್ ಮಾಡಿದ್ದಲ್ಲೆ 2ನೇ ಗೇಮ್ ಗೆದ್ದು 2-0ಯಲ್ಲಿ ಮುನ್ನಡೆ ಸಾಧಿಸಿದರು. ಕೊನೆಯವರೆಗೂ ಸರ್ವ್ ಉಳಿಸಿಕೊಂಡ ಅವರು 6-4ರಲ್ಲಿ ಗೆಲುವು ಸಾಧಿಸಿ ಸತತ 2ನೇ ವರ್ಷ ಸೆಮಿಫೈನಲ್ ಪ್ರವೇಶಿಸಿದರು.