ಕರ್ನಾಟಕ

karnataka

ETV Bharat / sports

ಡೋಪಿಂಗ್ ಪ್ರಕರಣ: 2012 ರ ಒಲಿಂಪಿಕ್ ಪದಕ ಕಳೆದುಕೊಳ್ಳವ ಭಯದಲ್ಲಿ ಆಸ್ಟ್ರೇಲಿಯಾ - 2012 ರ ಒಲಿಂಪಿಕ್ ಪದಕ ಕಳೆದುಕೊಳ್ಳವ ಭಯದಲ್ಲಿ ಆಸ್ಟ್ರೇಲಿಯಾ

ಬ್ರೆಂಟನ್ ರಿಕಾರ್ಡ್ ಅವರ ಡೋಪಿಂಗ್ ಪ್ರಕರಣ ಕುರಿತು ಸೋಮವಾರ ವಿಚಾರಣೆ ನಡೆಸಲಾಗಿದೆ ಎಂದು ಕೋರ್ಟ್ ಆಫ್ ಆರ್ಬಿಟ್ರೇಷನ್ ಹೇಳಿದೆ.

Australia could lose 2012 Olympic medal in doping case
2012 ರ ಒಲಿಂಪಿಕ್ ಪದಕ ಕಳೆದುಕೊಳ್ಳವ ಭಯದಲ್ಲಿ ಆಸ್ಟ್ರೇಲಿಯಾ

By

Published : Nov 10, 2020, 11:26 AM IST

ಲೌಸೇನ್: 2012 ರ ಲಂಡನ್ ಒಲಿಂಪಿಕ್​‌ ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಈಜು ಸ್ಪರ್ಧೆಯಲ್ಲಿ ಪಡೆದ ಪದಕವನ್ನು ಕಳೆದುಕೊಳ್ಳವ ಭೀತಿಯಲ್ಲಿ.

ಬ್ರೆಂಟನ್ ರಿಕಾರ್ಡ್ ಅವರ ಡೋಪಿಂಗ್ ಪ್ರಕರಣ ಕುರಿತು ಸೋಮವಾರ ವಿಚಾರಣೆ ನಡೆಸಲಾಗಿದೆ ಎಂದು ಕೋರ್ಟ್ ಆಫ್ ಆರ್ಬಿಟ್ರೇಷನ್ ಹೇಳಿದೆ. ಲಂಡನ್ ಕ್ರೀಡಾಕೂಟದ ನಂತರ ಡೋಪಿಂಗ್​ ಪರೀಕ್ಷಿಸಿದೆ. ರಿಕಾರ್ಡ್ 4x100 ಮೀಟರ್ ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಬ್ರೆಂಟನ್ ರಿಕಾರ್ಡ್ ಆಸ್ಟ್ರೇಲಿಯಾ ಈಜು ಪಟು

ಈ ಪ್ರಕರಣವನ್ನು ಕಳೆದ ವಾರ ಆಸ್ಟ್ರೇಲಿಯಾದ ಮಾಧ್ಯಮ ಬಹಿರಂಗಪಡಿಸಿದೆ. ಆಸ್ಟ್ರೇಲಿಯಾ ಪರ ರಿಕಾರ್ಡ್ ಮೂರು ಬಾರಿ ಒಲಿಂಪಿಕ್ ಪದಕ ವಿಜೇತರಾಗಿದ್ದಾರೆ. ಮೈಕೆಲ್ ಫೆಲ್ಪ್ಸ್ ಅವರನ್ನು ಒಳಗೊಂಡ ಯುನೈಟೆಡ್ ಸ್ಟೇಟ್ಸ್ ತಂಡ 4x100 ಮೀಟರ್ ಮೆಡ್ಲೆ ರಿಲೇಯಲ್ಲಿ ಚಿನ್ನ ಗೆದ್ದಿತು.

ರಿಕಾರ್ಡ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಡುವಿನ ಪ್ರಕರಣವನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಆಲಿಸಲಾಗಿದೆ ಎಂದು ಸಿಎಎಸ್ ಹೇಳಿದೆ. ಈ ಕುರಿತು ನ್ಯಾಯಾಲಯವು ತೀರ್ಪಿನ ಸಮಯವನ್ನು ನಿಗದಿಪಡಿಸಿಲ್ಲ.

2012 ರ ಒಲಿಂಪಿಕ್ಸ್‌ನ ಡೋಪಿಂಗ್ ಮಾದರಿಗಳನ್ನು ಎಂಟು ವರ್ಷಗಳವರೆಗೆ ಸಂಗ್ರಹಿಸಲು ಅನುಮತಿಸಲಾಗಿದೆ. ಮತ್ತು ಪ್ರಯೋಗಾಲಯಗಳು ಉತ್ತಮ ವಿಧಾನಗಳನ್ನು ಅಭಿವೃದ್ಧಿಪಡಿಸಿದಾಗ ಮರು ಪರೀಕ್ಷಿಸಲಾಗುತ್ತದೆ.

ಇತರ ನಿಷೇಧಿತ ವಸ್ತುಗಳ ಬಳಕೆಯನ್ನ ಮರೆ ಮಾಡಬಲ್ಲ ಮೂತ್ರವರ್ಧಕ ಮತ್ತು ಮರೆ ಮಾಚುವ ಏಜೆಂಟ್ ಫ್ಯೂರೋಸೆಮೈಡ್‌ ಪರೀಕ್ಷೆಯಲ್ಲಿ ರಿಕಾರ್ಡ್ ನ ಧನಾತ್ಮಕ ವರದಿ ಬಂದಿತ್ತು. ಆ ಸಮಯದಲ್ಲಿ ರಿಕಾರ್ಡ್‌ನ ಮೂತ್ರದ ಮಾದರಿಯಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.

ರಿಕಾರ್ಡ್‌ನ ಮಾದರಿಯಲ್ಲಿ ನಿಷೇಧಿತ ವಸ್ತುವಿನ ಒಂದು ಸಣ್ಣ ಪ್ರಮಾಣವಿದೆ ಎಂದು ವರದಿಯಾಗಿದೆ. ಇದು ಕಲುಷಿತವಾದ ಪ್ರತ್ಯಕ್ಷವಾದ ಔಷಧಿಗಳಿಂದ ಬಂದಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದರೆ ನಿಯಮಗಳ ಪ್ರಕಾರ ಕ್ರೀಡಾಪಟುಗಳು ಅನರ್ಹತೆ ಮತ್ತು ನಿಷೇಧವನ್ನು ಎದುರಿಸುತ್ತಾರೆ. ಆಸ್ಟ್ರೇಲಿಯಾವನ್ನು ಅನರ್ಹಗೊಳಿಸಿದರೆ, ನಾಲ್ಕನೇ ಸ್ಥಾನದಲ್ಲಿರುವ ಬ್ರಿಟಿಷ್ ತಂಡ ಕಂಚಿನ ಪದಕ ಪಡೆಯುತ್ತದೆ.

37 ರ ಹರೆಯದ ರಿಕಾರ್ಡ್, 2008 ರ ಬೀಜಿಂಗ್ ಒಲಿಂಪಿಕ್​‌ನಲ್ಲಿ ಎರಡು ಬೆಳ್ಳಿ ಪದಕ, ಹಾಗು 4x100 ಮೆಡ್ಲೆ ರಿಲೇಯಲ್ಲಿ ಒಂದು ಮತ್ತು 200 ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಮತ್ತೊಂದು ಪದಕ ಗೆದ್ದಿದ್ದರು.

ABOUT THE AUTHOR

...view details