ಹ್ಯಾಂಗ್ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ದಾಖಲೆ ಮಾಡಿತ್ತು. 4ನೇ ಪ್ಯಾರಾ ಏಷ್ಯಾಡ್ನಲ್ಲೂ ಭಾರತೀಯ ಅಥ್ಲೀಟ್ಗಳು ಹಿಂದಿನ ಪದಕ ಸಾಧನೆ ಮೀರಿ ಗೆದ್ದು ದಾಖಲೆ ಮಾಡಿದ್ದಾರೆ. ನಾಳೆ ಪ್ಯಾರಾ ಏಷ್ಯನ್ ಗೇಮ್ಸ್ಗೆ ತೆರೆ ಬೀಳಲಿದ್ದು, 6ನೇ ದಿನವಾದ ಇಂದು ಭಾರತ 17 ಪದಕ ಬಾಚಿಕೊಂಡಿದ್ದು 7 ಚಿನ್ನ, 6 ಬೆಳ್ಳಿ ಮತ್ತು 4 ಕಂಚು ಒಳಗೊಂಡಿದೆ. ಒಟ್ಟಾರೆ ಭಾರತ ಇಲ್ಲಿಯವರೆಗೆ 99 (25 ಚಿನ್ನ, 29 ಬೆಳ್ಳಿ ಮತ್ತು 45 ಕಂಚು) ಪದಕಗಳನ್ನು ಗೆದ್ದಿದೆ.
ಏಷ್ಯನ್ ಪ್ಯಾರಾ ಗೇಮ್ಸ್‌ನ ನಾಲ್ಕನೇ ಆವೃತ್ತಿಗೆ ಭಾರತದಿಂದ 303 ಅಥ್ಲೀಟ್‌ಗಳನ್ನು- 191 ಪುರುಷರು ಮತ್ತು 112 ಮಹಿಳೆಯರು ತೆರಳಿದ್ದರು. ಮೊದಲ ಬಾರಿಗೆ ಇಷ್ಟು ಪ್ಯಾರಾ ಅಥ್ಲೀಟ್ಗಳು ಭಾಗವಹಿಸಿದ್ದಾರೆ. 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು 190 ಕ್ರೀಡಾಪಟುಗಳನ್ನು ಕಳುಹಿಸಿತ್ತು. 15 ಚಿನ್ನ ಸೇರಿದಂತೆ 72 ಪದಕಗಳನ್ನು ಗೆದ್ದುಕೊಂಡಿತ್ತು.
ಇಂದಿನ ಪದಕ ಗೆಲುವು:
ಚಿನ್ನ:
- ಮಹಿಳೆಯರ ವೈಯಕ್ತಿಕ ಆರ್ಚರಿ ಕಾಂಪೌಂಡ್ ಓಪನ್ ಸ್ಫರ್ಧೆಯಲ್ಲಿ ಶೀತಲ್ ದೇವಿ ಚಿನ್ನದ ಪದಕ ಗೆದ್ದರು.
- ಪುರುಷರ 1,500 ಮೀ. ಟಿ-38 ಪುರುಷರ 1500ಮೀ ಟಿ-38 ಸ್ಪರ್ಧೆಯಲ್ಲಿ ರಮಣ್ ಶರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಈವೆಂಟ್‌ನಲ್ಲಿ ಅವರು 4:20.80 ಸಮಯದಲ್ಲಿ ಗುರಿ ತಲುಪಿ ಏಷ್ಯಾನ್ ಗೇಮ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ.
- ಬ್ಯಾಡ್ಮಿಂಟನ್ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದ್ದು ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದುಕೊಂಡಿದೆ. ಪುರುಷರ ಡಬಲ್ಸ್ ನಿತೇಶ್ ಕುಮಾರ್, ತರುಣ್ ಮತ್ತು ಸಿಂಗಲ್ಸ್ನಲ್ಲಿ ಪ್ರಮೋದ್ ಭಗತ್, ಸುಹಾಸ್ ಯತಿರಾಜ್ ಹಾಗೆಯೇ ಮಹಿಳೆಯರ ಸಿಂಗಲ್ಸ್ ಎಸ್ಯು 5 ವಿಭಾಗದಲ್ಲಿ ತುಳಸಿಮತಿ ಮುರುಗೇಶನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
- ಪುರುಷರ ಲಾಂಗ್ ಜಂಪ್-ಟಿ64 ವಿಭಾಗದಲ್ಲಿ 6.80ದೂರ ಜಿಗಿದು ಹೊಸ ಏಷ್ಯನ್ ರೆಕಾರ್ಡ್ ಮತ್ತು ಪ್ಯಾರಾ ಗೇಮ್ಸ್ ದಾಖಲೆ ಧರ್ಮರಾಜ್ ಸೋಲೈರಾಜ್ ಚಿನ್ನದ ಪದಕ ಗೆದ್ದಿದ್ದಾರೆ.