ನವದೆಹಲಿ:ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್ಶಿಪ್ನ ಪುರುಷರ ವಿಭಾಗದ ರಿಕರ್ವ್ ಓಪನ್ ಪಂದ್ಯದಲ್ಲಿ ಭಾರತದ ವಿವೇಕ್ ಚಿಕಾರ ಚಿನ್ನದ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್ಶಿಪ್: ಭಾರತಕ್ಕೆ ಚಿನ್ನದ ಪದಕ - ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ
ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಬಿಲ್ಲುಗಾರ ವಿವೇಕ್ ಚಿಕಾರ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾರತಕ್ಕೆ ಚಿನ್ನದ ಪದಕ
29 ವರ್ಷದ ಚಿಕಾರ, ಚೀನಾ ದೇಶದ ಸಿಜುನ್ ವಾಂಗ್ ವಿರುದ್ಧ 7-1 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಬಂಗಾರದ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಕೊರಿಯಾದ ಪರ್ಕ್ ಜುನ್ ಬಿಮಯಾಮ್ ಅವರನ್ನ 7-3 ಅಂಕಗಳಿಂದ ಸೋಲಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ವಿವೇಕ್ ಚಿಕಾರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಟೂರ್ನಿಯ ಗುಂಪು ವಿಭಾಗದಲ್ಲಿ ಜ್ಯೋತಿ ಬಲಿಯನ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ ಬೆಳ್ಳಿ ಪದಕ ಜಯಿಸಿದ್ದಾರೆ.