ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದೆ. ಶೂಟಿಂಗ್ನಲ್ಲಿ ಭಾರತ 12 ಪದಕಗಳನ್ನು ಬಾಚಿಕೊಂಡಿದೆ. ಟ್ರ್ಯಾಕ್ ಸೈಕ್ಲಿಂಗ್ ಭಾರತದ ಡೇವಿಡ್ ಬೆಕ್‌ಹ್ಯಾಮ್ ಪುರುಷರ ಸ್ಪ್ರಿಂಟ್ನಲ್ಲಿ ಕ್ವಾರ್ಟರ್-ಫೈನಲ್ ತಲುಪಿದ್ದಾರೆ. ಭಾರತೀಯ ಸೈಕ್ಲಿಸ್ಟ್ ಡೇವಿಡ್ ಬೆಕ್‌ಹ್ಯಾಮ್ ಎಲ್ಕಟೋಚೊಂಗೊ ಅವರು ಪುರುಷರ ಸ್ಪ್ರಿಂಟ್ 1/8 ಫೈನಲ್ ರಿಪಿಚೇಜ್ ಹೀಟ್ 1 ರಲ್ಲಿ ಟೈಮ್‌ಶೀಟ್‌ನಲ್ಲಿ ಅಗ್ರಸ್ಥಾನ ಪಡೆದು ಏಷ್ಯನ್ ಗೇಮ್ಸ್ 2023 ರಲ್ಲಿ ಕ್ವಾರ್ಟರ್-ಫೈನಲ್ ತಲುಪಿದರು. ಡೇವಿಡ್ ಬೆಕ್‌ಹ್ಯಾಮ್ ನಾಳೆ ಬೆಳಗ್ಗೆ ಭಾರತೀಯ ಕಾಲಮಾನ 7:48ಕ್ಕೆ ಪ್ರಾರಂಭವಾಗುವ ಕ್ವಾರ್ಟರ್-ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮೊದಲು, ರೊನಾಲ್ಡೊ ಸಿಂಗ್ ಲೈಟೊಂಜಮ್ 1/16 ರೆಪೆಚೇಜ್ ಸುತ್ತಿನಲ್ಲಿ ಸೋತರು.
ಟೆನಿಸ್ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಸುಮಿತ್ ನಗಾಲ್ಗೆ ಸೋಲು: ಐದನೇ ಶ್ರೇಯಾಂಕದ ಭಾರತೀಯ ಟೆನ್ನಿಸ್ ಪಟು ಸುಮಿತ್ ನಗಾಲ್ 2023 ರ ಏಷ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಚೀನಾದ ಜಾಂಗ್ ಝಿಜೆನ್ ವಿರುದ್ಧ 6-7, 6-1, 6-2 ಸೆಟ್‌ಗಳಿಂದ ಸೋತರು. ಮೊದಲ ಪಂದ್ಯದಲ್ಲಿ ಟೈ ಬ್ರೇಕರ್ ಗೆದ್ದ ನಂತರ ಸೆಟ್, ನಗಲ್ ಪಂದ್ಯದ ಉಳಿದ ಭಾಗದಲ್ಲಿ ಜಾಂಗ್ ಅವರು ಪ್ರಾಬಲ್ಯ ಸಾಧಿಸುವಲ್ಲಿ ವಿಫಲರಾದರು.
ಚೆಸ್:ಮಹಿಳೆಯರ ವೈಯಕ್ತಿಕ ಚೆಸ್‌ನ 8ನೇ ಸುತ್ತಿನಲ್ಲಿ ಇಬ್ಬರು ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ಗಳಾದ ಕೋನೇರು ಹಂಪಿ ಮತ್ತು ಹರಿಕಾ ದ್ರೋಣ 8ನೇ ಸುತ್ತಿನಲ್ಲಿ ಡ್ರಾ ಮಾಡಿಕೊಂಡರು. ಇವರಿಬ್ಬರು ಅಂಕಪಟ್ಟಿಯಲ್ಲಿ 5.0 ಅಂಕಗಳೊಂದಿಗೆ ಸಮಬಲದಲ್ಲಿದ್ದು, ಕೊನೆರು ಹಂಪಿ ಪ್ರಸ್ತುತ ಐದನೇ ಸ್ಥಾನದಲ್ಲಿದ್ದಾರೆ. ವನಿತೆಯರ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಸಾಧನೆ ಸಾಧ್ಯವಿಲ್ಲ. ಕಾರಣ ಮುಂಬರುವ ಅಂತಿಮ ಸುತ್ತಿನಲ್ಲಿ ಕೇವಲ 1.0 ಪಾಯಿಂಟ್ ಇದೆ. ಇಬ್ಬರು ಭಾರತೀಯ ಆಟಗಾರ್ತಿಯರು ಎರಡನೇ ಸ್ಥಾನದಿಂದ 1.5 ಪಾಯಿಂಟ್ ದೂರ ಇದ್ದಾರೆ. ಹೀಗಾಗಿ ಮೊದಲೆರಡು ಪದಕ ದೂರ ಸರಿದಿವೆ.