ಹ್ಯಾಂಗ್ಝೌ (ಚೀನಾ): ಕಳೆದ ಆರು ದಿನಗಳಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂದಿಗೂ ಹಲವು ಕ್ರೀಡೆಗಳಲ್ಲಿ ಪದಕಗಳ ನಿರೀಕ್ಷೆ ಇದೆ. ಏಷ್ಯನ್ ಗೇಮ್ಸ್‌ನ ಏಳನೇ ದಿನ ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆದಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಚಿನ್ನದ ಪದಕದ ಪಂದ್ಯದಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಅವರು ಚೀನಾದ ಜಾಂಗ್ ಬೋವಿನ್-ಜಿಯಾಗ್ ರಾಂಕ್ಸಿನ್ ಎದುರು ಸೋಲನ್ನೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ವಾಲಿಬಾಲ್: ಭಾರತ ಮಹಿಳಾ ತಂಡ ಕೊರಿಯಾ ವಿರುದ್ಧದ ಪೂಲ್ ಪಂದ್ಯದ ಮೊದಲ ಸೆಟ್‌ನಲ್ಲಿ 25-23 ರಿಂದ ಗೆದ್ದಿದೆ.
ಲಾಂಗ್ಜಂಪ್: ಪುರುಷರ ಲಾಂಗ್ ಜಂಪ್‌ನಲ್ಲಿ ಮುರಳಿ ವಿಜಯಶಂಕರ್ ಮತ್ತು ಜೇಸನ್ ಆಲ್ಡ್ರಿನ್ ಫೈನಲ್ ತಲುಪಿದ್ದಾರೆ. ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಪುರುಷರ 1500 ಮೀ ಹೀಟ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರಾಜಿ ಮತ್ತು ನಿತ್ಯಾ ರಾಮರಾಜ್ ಕೂಡ ಫೈನಲ್‌ನಲ್ಲಿ ಆಡಲಿದ್ದಾರೆ. ಅಥ್ಲೆಟಿಕ್ಸ್‌ನ ಈ ಎಲ್ಲಾ ಪದಕ ಸ್ಪರ್ಧೆಗಳು ನಾಳೆ ಅಂದರೆ ಭಾನುವಾರದಂದು ನಡೆಯಲಿವೆ.
ಸ್ಪೀಡ್ ಸ್ಕೇಟಿಂಗ್: ಪುರುಷರ ಸ್ಪೀಡ್ ಸ್ಕೇಟಿಂಗ್ 1000 ಮೀಟರ್ ಫೈನಲ್‌ನಲ್ಲಿ ಆನಂದಕುಮಾರ್ ವೆಲ್ಕುಮಾರ್ 15:40.978 ರಲ್ಲಿ ಆರನೇ ಸ್ಥಾನ ಗಳಿಸಿದರೆ, ಸಿದ್ದಾಂತ್ ರಾಹುಲ್ ಕಾಂಬ್ಳೆ 15:57.944 ರಲ್ಲಿ ಏಳನೇ ಸ್ಥಾನ ಪಡೆದರು.