ಹ್ಯಾಂಗ್ಝೌ(ಚೀನಾ):ಕಳೆದ ಆರು ದಿನಗಳಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂದಿಗೂ ಹಲವು ಕ್ರೀಡೆಗಳಲ್ಲಿ ಪದಕಗಳ ನಿರೀಕ್ಷೆ ಇದೆ. ಏಷ್ಯನ್ ಗೇಮ್ಸ್‌ನ ಏಳನೇ ದಿನ ಪದಕ ಪಟ್ಟಿಯಲ್ಲಿ ಭಾರತದ ಚಿನ್ನದ ಖಾತೆ ತೆರೆದಿದೆ. ರುತುಜಾ ಭೋಸಲೆ ಮತ್ತು ರೋಹನ್ ಬೋಪಣ್ಣ ಜೋಡಿ ಮಿಶ್ರ ಡಬಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದಾರೆ.
ಮಿಶ್ರ ಡಬಲ್ಸ್ ಟೆನಿಸ್‌ನಲ್ಲಿ ಚಿನ್ನ: ರುತುಜಾ ಭೋಸಲೆ ಮತ್ತು ರೋಹನ್ ಬೋಪಣ್ಣ ಜೋಡಿ ಮಿಶ್ರ ಡಬಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ. ಚೈನೀಸ್ ತೈಪೆಯ ಅನ್-ಶೌ ಲಿಯಾಂಗ್ ಮತ್ತು ತ್ಸುಂಗ್ ಹಾವ್ ಹುವಾಂಗ್ ಜೋಡಿಯನ್ನು ಮೂರನೇ ಸೆಟ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಬೋಸಲೆ ಮತ್ತು ಬೋಪಣ್ಣ ಜೋಡಿ ಸೋಲಿಸಿತು. 43ರ ಹರೆಯದ ರೋಹನ್ ಬೋಪಣ್ಣ ದೇಶದ ನಿರೀಕ್ಷೆಗೆ ತಕ್ಕಂತೆ ಆಟವಾಡಿದರು. ಇದರೊಂದಿಗೆ ಭಾರತ 2002 ರಿಂದ ಟೆನಿಸ್‌ನಲ್ಲಿ ಚಿನ್ನದ ಪದಕಗಳ ಸರಣಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಾರತಕ್ಕೆ ಲಭಿಸಿದ ಬೆಳ್ಳಿ ಪದಕ:10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಚಿನ್ನದ ಪದಕದ ಪಂದ್ಯದಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಅವರು ಚೀನಾದ ಜಾಂಗ್ ಬೋವಿನ್-ಜಿಯಾಗ್ ರಾಂಕ್ಸಿನ್ ಎದುರು ಸೋಲನ್ನೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಬಾಕ್ಸಿಂಗ್:ಟೋಕಿಯೊ ಒಲಿಂಪಿಕ್ಸ್ 2020ರ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೋರ್ಗೆಹೈನ್ ಅವರು 75 ಕೆಜಿ ಸೆಮಿಫೈನಲ್‌ಗೆ ಪ್ರವೇಶಿಸಲು ಸುಯೆನ್ ಸಿಯೊಂಗ್ ಅವರನ್ನು ಸೋಲಿಸಿ ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದರು. ಆದ್ರೂ ಸಹಿತ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಸ್ಥಾನವನ್ನು ಅವರು ಇನ್ನೂ ಪಡೆದಿಲ್ಲ. 75 ಕೆಜಿ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಪಡೆದವರಿಗೆ ಮಾತ್ರ ಅರ್ಹತಾ ಕೋಟಾ ಸಿಗುತ್ತದೆ.
ಬಾಕ್ಸಿಂಗ್:ಬಾಕ್ಸರ್ ಪ್ರೀತಿ ಪನ್ವಾರ್ 54 ಕೆಜಿ ತೂಕ ವಿಭಾಗದಲ್ಲಿ ಭಾರತದ ಪದಕವನ್ನು ಖಚಿತಪಡಿಸಿದ್ದಾರೆ ಮತ್ತು ಸೆಮಿಫೈನಲ್ ತಲುಪುವ ಮೂಲಕ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ಕೋಟಾವನ್ನೂ ಖಚಿತಪಡಿಸಿದ್ದಾರೆ.
ಟೇಬಲ್ ಟೆನಿಸ್‌ನಲ್ಲಿ ನಿರಾಸೆ: ಟೇಬಲ್ ಟೆನಿಸ್‌ನಲ್ಲಿ ಭಾರತದ ಬಹುದೊಡ್ಡ ಭರವಸೆ ಎನಿಸಿರುವ ಮಾಣಿಕಾ ಮಾತ್ರಾ ನಿರಾಸೆ ಮೂಡಿಸಿದ್ದಾರೆ. ವಾಂಗ್ ಯಿದಿ ಆರನೇ ಸುತ್ತಿನ ಆಟದಲ್ಲಿ ಮನಿಕಾ ಬಾತ್ರಾ ಅವರನ್ನು ಸೋಲಿಸಿದ್ದಾರೆ ಮತ್ತು ಈ ಸೋಲಿನೊಂದಿಗೆ ಮಣಿಕಾ ಅವರ 2023 ರ ಏಷ್ಯನ್ ಗೇಮ್ಸ್ ಅಂತ್ಯಗೊಂಡಿತು.
ಲಿಮಾಯೆ ಈವೆಂಟಿಂಗ್ ಡ್ರೆಸ್ಸೇಜ್‌ನಲ್ಲಿ ಭಾರತ ಟಾಪ್:ಕುದುರೆ ಸವಾರಿಯಲ್ಲಿ ಭಾರತದ ಆಶಿಶ್ ಲಿಮಾಯೆ ಈವೆಂಟಿಂಗ್ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದರು. ಲಿಮಾಯೆ ಕೇವಲ 26.90 ಪೆನಾಲ್ಟಿ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಅಪೂರ್ವ ದಭಾಡೆ ಎಂಟನೇ ಹಾಗೂ ವಿಕಾಸ್ ಕುಮಾರ್ ಕ್ರಮವಾಗಿ 29.60 ಮತ್ತು 32.40 ಅಂಕಗಳೊಂದಿಗೆ 16ನೇ ಸ್ಥಾನ ಪಡೆದರು. ತಂಡ ವಿಭಾಗದಲ್ಲಿ ಭಾರತ 88.90 ಪೆನಾಲ್ಟಿ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈವೆಂಟಿಂಗ್ ಸ್ಪರ್ಧೆಗಳು ಮೂರು ದಿನಗಳವರೆಗೆ ನಡೆಯುತ್ತವೆ. ಇದರಲ್ಲಿ ಕುದುರೆ ಮತ್ತು ಸವಾರ ಡ್ರೆಸ್ಸೇಜ್, ಕ್ರಾಸ್ ಕಂಟ್ರಿ ಮತ್ತು ಶೋ ಜಂಪಿಂಗ್‌ನಲ್ಲಿ ಒಟ್ಟಿಗೆ ಸ್ಪರ್ಧಿಸುತ್ತಾರೆ. ಭಾನುವಾರ ಕ್ರಾಸ್ ಕಂಟ್ರಿ ಮತ್ತು ಸೋಮವಾರ ಜಂಪಿಂಗ್ ನಡೆಯಲಿದೆ.
ಲಾಂಗ್ಜಂಪ್: ಪುರುಷರ ಲಾಂಗ್ ಜಂಪ್‌ನಲ್ಲಿ ಮುರಳಿ ವಿಜಯಶಂಕರ್ ಮತ್ತು ಜೇಸನ್ ಆಲ್ಡ್ರಿನ್ ಫೈನಲ್ ತಲುಪಿದ್ದಾರೆ. ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಪುರುಷರ 1500 ಮೀ ಹೀಟ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರಾಜಿ ಮತ್ತು ನಿತ್ಯಾ ರಾಮರಾಜ್ ಕೂಡ ಫೈನಲ್‌ನಲ್ಲಿ ಆಡಲಿದ್ದಾರೆ. ಅಥ್ಲೆಟಿಕ್ಸ್‌ನ ಈ ಎಲ್ಲಾ ಪದಕ ಸ್ಪರ್ಧೆಗಳು ನಾಳೆ ನಡೆಯಲಿವೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಮಾರ್ಕ್ಯೂ ಗೇಮ್ಸ್‌ನ ನಡೆಯುತ್ತಿರುವ ಆವೃತ್ತಿಯಲ್ಲಿ ಭಾರತ 50 ವರ್ಷಗಳಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಶ್ರೇಣಿಯನ್ನು ಪಡೆದುಕೊಂಡಿದೆ. ಭಾರತ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ ಮತ್ತು 9 ಚಿನ್ನ, 12 ಬೆಳ್ಳಿ ಮತ್ತು 13 ಕಂಚು ಸೇರಿದಂತೆ ಒಟ್ಟು 35 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಹೆಚ್ಚು ಛಾಪು ಮೂಡಿಸಿದ್ದು, ಶೂಟಿಂಗ್ನಲ್ಲಿ ಭಾರತ ಈವರೆಗೆ 19 ಪದಕಗಳನ್ನು ಗೆದ್ದುಕೊಂಡಿದೆ. ಕಳೆದ 50 ವರ್ಷಗಳ ಹಿಂದೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ 1962 ರ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನವನ್ನು ಭಾರತ ಪಡೆದುಕೊಂಡಿತ್ತು. ಆ ಕ್ರೀಡಾಕೂಟದಲ್ಲಿ ಭಾರತ 10 ಚಿನ್ನ, 13 ಬೆಳ್ಳಿ ಮತ್ತು 10 ಕಂಚಿನ ಪದಕ ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದುಕೊಂಡಿತ್ತು.
ಓದಿ:Asian Games 2023: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡಕ್ಕೆ ಒಲಿದು ಬಂದ ಬೆಳ್ಳಿ ಪದಕ