ಕರ್ನಾಟಕ

karnataka

ETV Bharat / sports

Asian Games 2023: ಗಾಲ್ಫ್ ಪಟು ಅದಿತಿ ಅಶೋಕ್​​ಗೆ ಬೆಳ್ಳಿ ಪದಕ... ಏಷ್ಯನ್ ಗೇಮ್ಸ್​ನಲ್ಲಿ ಹೊಸ ದಾಖಲೆ ಬರೆದ ಕನ್ನಡತಿ - ಏಷ್ಯನ್ ಗೇಮ್ಸ್ 2023

Asian Games 2023: ಕರ್ನಾಟಕ ಗಾಲ್ಫ್ ಪಟು ಅದಿತಿ ಅಶೋಕ್ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಗಾಲ್ಫ್​ನಲ್ಲಿ ಪದಕ ಜಯಿಸಿದ ದೇಶದ ಮೊದಲ ಮಹಿಳಾ ಪಟು ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

Asian Games 2023 Aditi Ashok secures silver in golf
Aditi Ashok secures silver in golf

By ETV Bharat Karnataka Team

Published : Oct 1, 2023, 11:26 AM IST

Updated : Oct 1, 2023, 12:33 PM IST

ಹಾಂಗ್‌ಝೌ (ಚೀನಾ): ಏಷ್ಯನ್‌ ಕ್ರೀಡಾಕೂಟದ ಗಾಲ್ಫ್‌ನಲ್ಲಿ ಕರ್ನಾಟಕ ಅದಿತಿ ಅಶೋಕ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದಿದ್ದಾರೆ. ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.

ಇನ್ನು ಏಷ್ಯನ್ ಗೇಮ್ಸ್​ ಗಾಲ್ಫ್ ಕ್ರೀಡೆಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಕೂಟ ಎಂಬ ದಾಖಲೆ ಬರೆದಿದ್ದಾರೆ. ಫೈನಲ್​ನಲ್ಲಿ ಆರಂಭದಿಂದ ಮುನ್ನಡೆಯಲ್ಲಿದ್ದ ಅದಿತಿ ಅಶೋಕ್​ಗೆ ಚಿನ್ನ ಗೆಲ್ಲುವ ಅವಕಾಶವಿತ್ತು. ಆದ್ರೆ ಕೊನೆ ಎರಡ್ಮೂರು ಹೊಡೆತಗಳಲ್ಲಿ ಹಿನ್ನಡೆ ಅನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಥಾಯ್ಲೆಂಡ್​​ನ ಅರ್ಪಿಚಯಾ ಯುಬೋಲ್ ಚಿನ್ನದ ಪದಕ ಜಯಿಸಿದರು.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಅದಿತಿ ಅಶೋಕ್ ಗಮನ ಸೆಳೆದಿದ್ದರು. ಇದೀಗ ಏಷ್ಯನ್ ಗೇಮ್ಸ್​ನಲ್ಲಿ ದಾಖಲೆಯ ಗೋಲು ಬರೆದಿದ್ದಾರೆ.

ಅದ್ಭುತ ಪ್ರದರ್ಶನ ತೋರಿದ ಅದಿತಿ ಅಶೋಕ್: ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ಅದಿತಿ ಫೈನಲ್ ತಲುಪಿದ್ದರು. ಇಂದಿನ ಪಂದ್ಯದ ವೇಳೆ ಆರಂಭದಲ್ಲಿ ಮುನ್ನಡೆಯಲ್ಲಿದ್ದರು. ಆದ್ರೆ ಕೆಲ ಹೊಡೆತಗಳು ತಪ್ಪಿದ್ದರಿಂದ ಅಗ್ರ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದು ಬೆಳ್ಳಿ ಪಡೆದರು. ಪರಿಣಾಮವಾಗಿ ಥಾಯ್ಲೆಂಡ್​ನ ಪಟು ಮೊದಲ ಸ್ಥಾನಕ್ಕೇರಿದರು.

ವೈಯಕ್ತಿಕ ವಿಭಾಗದಲ್ಲಿ ಅದಿತಿ ಅಶೋಕ್ ಬೆಳ್ಳಿ ಸಾಧನೆ ಕೂಡ ಒಂದು ಮೈಲುಗಲ್ಲಾಗಿದೆ. ಈವರೆಗೆ ಗಾಲ್ಫ್​ನಲ್ಲಿ ಪದಕ ಪಡೆದ ದೇಶದ ಮೊಲದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇನ್ನು ಗಾಲ್ಪ್​ ಮಹಿಳಾ ಟೀಂ ಪ್ರಶಸ್ತಿ ಜಯಿಸುವಲ್ಲಿ ವಿಫಲವಾಯಿತು. ಉತ್ತಮವಾಗಿ ಆಟ ಆಡಿರುವ ಮಹಿಳಾ ತಂಡವು ಕಂಚು ಜಯಿಸುವ ಸಾಧ್ಯತೆ ಇತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಕೆಲ ತಪ್ಪು ಹೊಡೆತಗಳಿಂದ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದರಿಂದ ಭಾರತಕ್ಕೆ ಒಂದು ಪದಕ ತಪ್ಪಿತು.

ಇದನ್ನೂ ಓದಿ: Asian Games 2023: 10000 ಮೀ ಓಟದಲ್ಲಿ ಭಾರತಕ್ಕೆ ಎರಡು ಪದಕದ ಗರಿ.. ಕಾರ್ತಿಕ್​ಗೆ ಬೆಳ್ಳಿ, ಗುಲ್ವೀರ್​​ಗೆ ಕಂಚು

ಏಷ್ಯನ್ ಗೇಮ್ಸ್‌ 8 ನೇ ದಿನ:ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದುಪುರುಷರ ಟ್ರ್ಯಾಪ್ ಶೂಟಿಂಗ್‌ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಮಹಿಳಾ ಟ್ರ್ಯಾಪ್ ಶೂಟಿಂಗ್​ ವಿಭಾಗದಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಅವರು ಬೆಳ್ಳಿ ಪದಕ ಜಯಿಸಿದ್ದಾರೆ.

Last Updated : Oct 1, 2023, 12:33 PM IST

ABOUT THE AUTHOR

...view details