ಕರ್ನಾಟಕ

karnataka

ETV Bharat / sports

ಫುಟ್ಬಾಲ್​ ಪಂದ್ಯದ ವೇಳೆ ಮೈದಾನಕ್ಕೆ ಗ್ರೆನೇಡ್​​ ಎಸೆದ ಅರ್ಜೆಂಟೀನಾ ಅಭಿಮಾನಿಗಳು! - ಫುಟ್ಬಾಲ್​ ಮೈದಾನದಲ್ಲಿ ಬಾಂಬ್​ ಸ್ಫೋಟ

ಅರ್ಜೆಂಟೀನಾದಲ್ಲಿ ನೆವೆಲ್ಸ್​ ಓಲ್ಡ್​ ಬಾಯ್ಸ್​ ಮತ್ತು ರೊಸಾರಿಯೊ ಸೆಂಟ್ರಲ್​ ತಂಡಗಳ ಮಧ್ಯೆ ನಡೆದ ಪಂದ್ಯಕ್ಕೂ ಮೊದಲು ಕೆಲ ಕಿಡಿಗೇಡಿ ಅಭಿಮಾನಿಗಳು ಮೈದಾನದಲ್ಲಿ ಗ್ರೆನೇಡ್​ ಎಸೆದು ಆತಂಕ ಸೃಷ್ಟಿಸಿದ್ದಾರೆ. ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ..

football
ಗ್ರೆನೇಡ್

By

Published : Mar 21, 2022, 8:00 PM IST

ಅರ್ಜೆಂಟೀನಾ :ಫುಟ್ಬಾಲ್​ ಪಂದ್ಯ ಆರಂಭಕ್ಕೂ ಮುನ್ನ ಅರ್ಜೆಂಟೀನಾದ ಕೆಲ ಅಭಿಮಾನಿಗಳು ಮೈದಾನದೊಳಗೆ ಗ್ರೆನೇಡ್​ ಎಸೆದು ವಿಧ್ವಂಸಕತೆ ಮೆರೆದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ನೆವೆಲ್ಸ್​ ಓಲ್ಡ್​ ಬಾಯ್ಸ್​ ಮತ್ತು ರೊಸಾರಿಯೊ ಸೆಂಟ್ರಲ್​ ತಂಡಗಳ ಮಧ್ಯೆ ನಡೆದ ಪಂದ್ಯಕ್ಕೂ ಮುನ್ನ ಕೆಲ ಕಿಡಿಗೇಡಿ ಅಭಿಮಾನಿಗಳು ಮೈದಾನದಲ್ಲಿ ಗ್ರೆನೇಡ್​ ಬಾಂಬ್​ ಎಸೆದಿದ್ದಾರೆ. ಇದರಿಂದ ಮೈದಾನ ಕುಳಿ ಬಿದ್ದಿದೆ. ಇದನ್ನು ನೆವೆಲ್ಸ್​ ಫುಟ್​ಬಾಲ್​ ಫ್ರಾಂಚೈಸಿ ಟ್ವೀಟ್​ ಮಾಡಿದ್ದು, ಬಾಂಬ್​ ಸ್ಫೋಟಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಬಾಂಬ್​ ಸ್ಫೋಟದಿಂದಾಗಿ ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಇದರಿಂದಾಗಿ ನೆವೆಲ್ಸ್ ಓಲ್ಡ್ ಬಾಯ್ಸ್ ಮತ್ತು ರೊಸಾರಿಯೊ ಸೆಂಟ್ರಲ್ ನಡುವಿನ ಫುಟ್ಬಾಲ್ ಪಂದ್ಯ ವಿಳಂಬವಾಗಿ ಆರಂಭಗೊಂಡಿತು.

ಭೀತಿ ಮಧ್ಯೆ ನೆವೆಲ್ಸ್​ ತಂಡಕ್ಕೆ ಗೆಲುವು :ಬಾಂಬ್ ಸ್ಫೋಟದ ಮಧ್ಯೆಯೂ ಆರಂಭವಾದ ಪಂದ್ಯದಲ್ಲಿ ನೆವೆಲ್ಸ್​ ಓಲ್ಡ್​ ಬಾಯ್ಸ್​ ತಂಡ ರೊಸಾರಿಯೊ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ 'ನಮ್ಮಲ್ಲಿ ಗೆಲ್ಲುವ ಶಕ್ತಿ ಇದೆ. ನಿಮ್ಮಲ್ಲಿ ಬಾಂಬ್​ಗಳಿವೆ. ಅಷ್ಟೇ ವ್ಯತ್ಯಾಸ.. ಏನೇ ಆದರೂ ಗೆಲುವು ನಮ್ಮದೇ' ಎಂದು ನೆವೆಲ್ಸ್​ ತಂಡ ಟ್ವೀಟ್​ ಮಾಡಿದೆ.

2016ರ ಬಳಿಕ ಇದೇ ಮೊದಲ ಬಾರಿಗೆ ನೆವೆಲ್ಸ್​ ತಂಡ ರೊಸಾರಿಯೊ ವಿರುದ್ಧ ಗೆಲುವು ಸಾಧಿಸಿದ್ದು ವಿಶೇಷ. ಫುಟ್ಬಾಲ್ ದಂತಕಥೆ, ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ನೆವೆಲ್ಸ್ ಓಲ್ಡ್ ಬಾಯ್ಸ್ ತಂಡದಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.

ಓದಿ:ಐಪಿಎಲ್‌ 2022: 'ಎಂಐ ಅರೆನಾ'ದಲ್ಲಿ ಮುಂಬೈ ಇಂಡಿಯನ್ಸ್‌ ಮೋಜು ಮಸ್ತಿ..!

ABOUT THE AUTHOR

...view details