ಟೋಕಿಯೋ:ಭಾರತ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ನ 3 ಗುಂಪಿನ ತನ್ನ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7-1ರಿಂದ ಹೀನಾಯ ಸೋಲು ಕಂಡಿದೆ.
ಒಲಿಂಪಿಕ್ಸ್ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದ್ದ ಭಾರತ ಇಂದು ಆಸೀಸ್ ಪಡೆಯ ವಿರುದ್ಧ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು.
ಆಸ್ಟ್ರೇಲಿಯಾ 5ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಮೂಲಕ ತನ್ನ ಮೊದಲ ಗೋಲು ಸಿಡಿಸಿತು. 10ನೇ ನಿಮಿಷದಲ್ಲಿ ಡೇನಿಯಲ್ ಬಿಯಾಲ್, 23ನೇ ನಿಮಿಷದಲ್ಲಿ ಆ್ಯಂಡ್ರ್ಯೂ ಫ್ಲಿನ್, 26ನೇ ನಿಮಿಷದಲ್ಲಿ ಜೋಶುವಾ ಬೆಲ್ಜ್, 21 ನೇ ನಿಮಿಷದಲ್ಲಿ ಜೆರೆಮಿ ಹೇವಾರ್ಡ್, 40 ಮತ್ತು 42ನೇ ನಿಮಿಷದಲ್ಲಿ ಬ್ಲ್ಯಾಕ್ ಗೋವರ್ಸ್ ಹಾಗೂ 51ನೇ ನಿಮಿಷದಲ್ಲಿ ಗೋಲು ಸಂಪಾದಿಸಿದರು.