ಗೋವಾ: ಮುಂಬೈ ಸಿಟಿ ಎಫ್‌ಸಿ ತಂಡ ಎಫ್‌ಸಿ ಗೋವಾ ವಿರುದ್ಧದ ಸೆಮಿಫೈನಲ್ನಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ 6-5 ಗೋಲುಗಳಿಂದ ಮಣಿಸಿ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಲೆಗ್ ಒನ್ನಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿದ್ದ ಎರಡೂ ತಂಡಗಳು ಫೈನಲ್ ಪ್ರವೇಶಿಸಲು ಇಂದಿನ ಪಂದ್ಯ ಪ್ರಮುಖವಾಗಿತ್ತು. ಆದರೆ ಈ ಪಂದ್ಯದಲ್ಲಿ ಗೋಲುಗಳಿಸಲು ಎರಡೂ ತಂಡಗಳು ವಿಫಲವಾದವು. ಫೈನಲ್ಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಮೊದಲ 5 ಅವಕಾಶಗಳಲ್ಲಿ ಎರಡೂ ತಂಡಗಳೂ ತಲಾ ಎರಡು ಗೋಲುಗಳನ್ನು ಬಾರಿಸಿ ಮತ್ತೆ ಟೈ ಸಾಧಿಸಿದ್ದರಿಂದ ಮತ್ತೆ 5 ಅವಕಾಶಗಳನ್ನು ನೀಡಲಾಯಿತು. ಇದರಲ್ಲಿ ಮುಂಬೈ 4 ಗೋಲು ಬಾರಿಸಿದರೆ, ಗೋವಾ 3 ಗೋಲು ಬಾರಿಸಿ, ನಾಲ್ಕನೇ ಅವಕಾಶವನ್ನು ಕೈಚೆಲ್ಲಿದ್ದರಿಂದ ಮುಂಬೈ ತಂಡ 6-5ರಿಂದ ಮುನ್ನಡೆ ಪಡೆದು ಫೈನಲ್ ಪ್ರವೇಶಿಸಿತು.
ಮುಂಬೈ ಸಿಟಿ ಎಫ್‌ಸಿ ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ಬಾರಿಸಿದವರು