ಕರ್ನಾಟಕ

karnataka

ETV Bharat / sports

ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಶಿಪ್‌; ಇರಾನ್‌ನ ಶಹರ್ದರಿ ಸಿರ್ಜಾನ್‌ ವಿರುದ್ಧ ಗೋಕುಲಂ ಕೇರಳ ಎಫ್‌ಸಿಗೆ ಸೋಲು - ಅಕಾಬಾ

ಎಎಫ್‌ಸಿ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್‌ನ ತನ್ನ ಎರಡನೇ ಪಂದ್ಯದಲ್ಲಿ ಇರಾನ್‌ನ ಶಹರ್ದರಿ ಸಿರ್ಜಾನ್ ವಿರುದ್ಧ ಭಾರತದ ಗೋಕುಲಂ ಕೇರಳ ಎಫ್‌ಸಿ 1-0 ಅಂತರದಿಂದ ಸೋಲು ಅನುಭವಿಸಿದೆ.

Gokulam Kerala lose to Iran club in AFC Women's Club Championship
ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಶಿಪ್‌; ಇರಾನ್‌ನ ಶಹರ್ದರಿ ಸಿರ್ಜಾನ್‌ ವಿರುದ್ಧ ಗೋಕುಲಂ ಕೇರಳ ಎಫ್‌ಸಿಗೆ ಸೋಲು

By

Published : Nov 11, 2021, 12:09 PM IST

ಅಕಾಬಾ (ಜೋರ್ಡಾನ್):ಅಕಾಬಾ ಡೆವಲಪ್‌ಮೆಂಟ್ ಕಾರ್ಪೊರೇಟ್ ಸ್ಟೇಡಿಯಂನಲ್ಲಿ ನಡೆದ ಎಎಫ್‌ಸಿ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾರತದ ಗೋಕುಲಂ ಕೇರಳ ಎಫ್‌ಸಿ ಇರಾನ್‌ನ ಶಹರ್ದರಿ ಸಿರ್ಜಾನ್ ವಿರುದ್ಧ 1-0 ಅಂತರದಿಂದ ಸೋಲು ಅನುಭವಿಸಿದೆ.

ರಾಷ್ಟ್ರೀಯ ತಂಡದ ತಾರಾ ಆಟಗಾರರಾದ ಅದಿತಿ ಚೌಹಾನ್, ದಲಿಮಾ ಛಿಬ್ಬರ್ ಹಾಗೂ ಡಾಂಗ್ಮೆಯ್ ಗ್ರೇಸ್ ಅವರನ್ನೊಳಗೊಂಡ ಗೋಕುಲಂ ಕೇರಳ ಎಎಫ್‌ಸಿಗೆ ಈ ಟೂರ್ನಿಯಲ್ಲಿ ಇದು ಸತತ ಎರಡನೇ ಸೋಲಾಗಿದೆ.

ತನ್ನ ಮೊದಲ ಪಂದ್ಯದಲ್ಲಿ ಜೋರ್ಡಾನ್‌ನ ಅಮ್ಮನ್ ಕ್ಲಬ್ ವಿರುದ್ಧ ಗೋಕುಲಂ ಕೇರಳ 1-2 ಅಂತರದಿಂದ ಸೋಲು ಅನುಭವಿಸಿತ್ತು. ಅಮ್ಮನ್ ತಂಡದ ವಿರುದ್ಧ ಉತ್ತಮ ಆರಂಭ ಪಡೆದಿತ್ತು. ಎಲ್ಶದ್ದೈ ಅಚೆಂಪಾಂಗ್ ಅವರ ಉತ್ತಮ ದಾಳಿಯಿಂದಾಗಿ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಎರಡು ಬಾರಿ ಅವಕಾಶ ಬಿಟ್ಟುಕೊಟ್ಟಿದ್ದರಿಂದ ಅಮ್ಮನ್‌ಗೆ ಮುನ್ನಡೆ ದೊರೆಯಿತು. ಮೇಸಾ ಮತ್ತು ಸಮಿಯಾ ಔನಿ ಅವರ ಸ್ಟ್ರೈಕ್‌ಗಳು ಜೋರ್ಡಾನಿಯನ್ನರ ಜಯದ ಹಾದಿ ಸುಗಮಗೊಳಿಸಿತು.

ಪಂದ್ಯಾವಳಿಯ ವಿಜೇತರನ್ನು ರೌಂಡ್ - ರಾಬಿನ್ ಮಾದರಿಯಲ್ಲಿ ನಿರ್ಧರಿಸಲಾಗುತ್ತದೆ. ಆದರೆ, ಎರಡು ಪಂದ್ಯಗಳಿಂದ ಶೂನ್ಯ ಅಂಕಗಳೊಂದಿಗೆ, ಕೇರಳ ತಂಡವು ಉಜ್ಬೇಕಿಸ್ತಾನ್‌ನ ಎಫ್‌ಸಿ ಬುನ್ಯೋಡ್ಕುರ್ ವಿರುದ್ಧದ ಅಂತಿಮ ಪಂದ್ಯದ ನಂತರ ತವರಿಗೆ ವಾಪಸ್‌ ಆಗಲಿದೆ. ಈ ತಿಂಗಳ ಕೊನೆಯಲ್ಲಿ ಬ್ರೆಜಿಲ್, ಚಿಲಿ ಮತ್ತು ವೆನೆಜುವೆಲಾ ವಿರುದ್ಧದ ಪಂದ್ಯಗಳಿಗೆ ರಾಷ್ಟ್ರೀಯ ತಂಡದ ಆಟಗಾರರು ಸಜ್ಜಾಗಲಿದ್ದಾರೆ.

ಇದನ್ನೂ ಓದಿ:ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಶಿಪ್‌: ಇರಾನ್‌ ವಿರುದ್ಧ ಮೊದಲ ಗೆಲುವಿಗೆ ಗೋಕುಲಂ ಕೇರಳ ಎಫ್‌ಸಿ ರಣತಂತ್ರ

ABOUT THE AUTHOR

...view details