ನವದೆಹಲಿ:ಭಾರತ ಫುಟ್ಬಾಲ್ ತಂಡದ ಮಾಜಿ ಆಟಗಾರ ಪ್ರದಿಪ್ ಕುಮಾರ್ ಬ್ಯಾನರ್ಜಿ ನಿಧನರಾಗಿದ್ದಾರೆ. ಪಿ.ಕೆ.ಬ್ಯಾನರ್ಜಿ ಎಂದೇ ಪ್ರಖ್ಯಾತಿ ಗಳಿಸಿದ್ದ ಇವರು ಭಾರತ ಫುಟ್ಬಾಲ್ ತಂಡದ ನಾಯಕ, ಕೋಚ್ ಹಾಗೂ ಟೆಕ್ನಿಕಲ್ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷದ ಬ್ಯಾನರ್ಜಿ ಇಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರು 1962ರ ಏಷ್ಯಾನ್ ಗೇಮ್ಸ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ ಭಾರತ 2-1 ಗೋಲುಗಳ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿ ಸಿತ್ತು. 1956ರ ಮೆಲ್ಬರ್ನ್ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ತಂಡ ಪ್ರತಿನಿಧಿಸಿ ಆಸ್ಟ್ರೇಲಿಯಾ ವಿರುದ್ಧ 4-2ರ ಅಂತರದಿಂದ ಗೆಲುವು ಪಡೆದು ನಾಲ್ಕನೇ ಸ್ಥಾನ ಅಲಂಕರಿಸಿತ್ತು.