ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್​ ಹಂಟ್ ನಿಧನ

ಹಂಟ್​ 1996 ವಿಶ್ವಕಪ್​​ನಲ್ಲಿ 3 ಗೋಲು ಸಿಡಿಸಿ ಇಂಗ್ಲೆಂಡ್​ ಗುಂಪು ಹಂತದಿಂದ ತೇರ್ಗಡೆಯಾಗಲು ನೆರವಾಗಿದ್ದರು. ವಿಂಬ್ಲೇ ಸ್ಟೇಡಿಯಂನಲ್ಲಿ ವೆಸ್ಟ್​ ಜರ್ಮನಿ ವಿರುದ್ಧ ನಡೆದಿದ್ದ ಫೈನಲ್​ ಪಂದ್ಯ ಸೇರಿದಂತೆ ಎಲ್ಲಾ 6 ಪಂದ್ಯಗಳಲ್ಲೂ ಹಂಟ್​ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದು ಇಂಗ್ಲೆಂಡ್​ ಫುಟ್​ಬಾಲ್​ನಲ್ಲಿ ಗೆದ್ದಂತ ಏಕೈಕ ಮೇಜರ್​ ಟ್ರೋಫಿಯಾಗಿಯೇ ಉಳಿದಿದೆ..

Liverpool great Roger Hunt dies at 83
ರೋಜರ್​ ಹಂಟ್ ನಿಧನ

By

Published : Sep 28, 2021, 8:44 PM IST

ಲಿವರ್​ಪೂಲ್ :ಇಂಗ್ಲೆಂಡ್ ವಿಶ್ವಕಪ್ ವಿಜೇತ​ ತಂಡದ ಸದಸ್ಯ ಮತ್ತು ಲಿವರ್​ಪೂಲ್ ಕ್ಲಬ್​ನ ಗರಿಷ್ಠ ಗೋಲು ಸಿಡಿಸಿದ ದಾಖಲೆ ಹೊಂದಿದ್ದ ರೋಜರ್​ ಹಂಟ್​ ಮಂಗಳವಾರ ನಿಧರಾಗಿದ್ದಾರೆ.

ತಮ್ಮ 83ನೇ ವರ್ಷದಲ್ಲಿ ಕೊನೆಯುಸಿರಿಳೆದಿದ್ದಾರೆ. ಹಂಟ್​ ಬಹುತೇಕ ವೃತ್ತಿ ಜೀವನವನ್ನು ಕಳೆದಿದ್ದ ಲಿವರ್​ಪೂಲ್ ಕ್ಲಬ್​ ಲೆಜೆಂಡರಿ ಫುಟ್ಬಾಲಿಗ ಆನಾರೋಗ್ಯ ಕಾರಣ ಸೋಮವಾರ ನಿಧನರಾಗಿದ್ದಾರೆಂಬ ವಿಷಯವನ್ನು ತಿಳಿಸಿದೆ.

ಹಂಟ್​ 1996 ವಿಶ್ವಕಪ್​​ನಲ್ಲಿ 3 ಗೋಲು ಸಿಡಿಸಿ ಇಂಗ್ಲೆಂಡ್​ ಗುಂಪು ಹಂತದಿಂದ ತೇರ್ಗಡೆಯಾಗಲು ನೆರವಾಗಿದ್ದರು. ವಿಂಬ್ಲೇ ಸ್ಟೇಡಿಯಂನಲ್ಲಿ ವೆಸ್ಟ್​ ಜರ್ಮನಿ ವಿರುದ್ಧ ನಡೆದಿದ್ದ ಫೈನಲ್​ ಪಂದ್ಯ ಸೇರಿದಂತೆ ಎಲ್ಲಾ 6 ಪಂದ್ಯಗಳಲ್ಲೂ ಹಂಟ್​ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದು ಇಂಗ್ಲೆಂಡ್​ ಫುಟ್​ಬಾಲ್​ನಲ್ಲಿ ಗೆದ್ದಂತ ಏಕೈಕ ಮೇಜರ್​ ಟ್ರೋಫಿಯಾಗಿಯೇ ಉಳಿದಿದೆ.

ಇನ್ನು ಹಂಟ್​ ಲಿವರ್​ಪೂಲ್​ ಪರ 1964 ಮತ್ತು 1966ರಲ್ಲಿ ಎರಡೂ ಲೀಗ್ ಟೈಟಲ್​ ಗೆದ್ದಿದ್ದಾರೆ. ಅವರು1958 ರಿಂದ 1969ರವರೆಗೆ ಲಿವರ್​ಪೂಲ್ ಪರ 492 ಪಂದ್ಯಗಳನ್ನಾಡಿ 285 ಗೋಲುಗಳನ್ನು ಸಿಡಿಸಿದ್ದಾರೆ.

ಇದನ್ನು ಓದಿ:ಭಾರತದ ಕೋಚ್ ಆಗಲು ಕುಂಬ್ಳೆಗೆ ನಿರಾಸಕ್ತಿ, ಗಂಗೂಲಿ ಬಿಟ್ಟು ಉಳಿದ ಸದಸ್ಯರಿಗೂ ಇಷ್ಟವಿಲ್ವಂತೆ!

ABOUT THE AUTHOR

...view details