ಕರ್ನಾಟಕ

karnataka

ETV Bharat / sports

ಈಸ್ಟ್​ ಬೆಂಗಾಲ್​ 2020-21ರ ಐಎಸ್​ಎಲ್​ ಲೀಗ್​ನಲ್ಲಿ ಆಡಲಿದೆ: ಮಮತಾ ಬ್ಯಾನರ್ಜಿ

100 ವರ್ಷ ಪೂರೈಸಿರುವ ಕ್ಲಬ್​ ಸಿಮೆಂಟ್​ ಕಂಪನಿಯೊಂದು ಹೂಡಿಕೆ ಮಾಡಲು ಸಿದ್ದವಿದ್ದು ಎಂದಿರುವ ಮಮತಾ ಮುಂದಿನ ಇಂಡಿಯನ್ ಸೂಪರ್​ ಲೀಗ್​ನಲ್ಲಿ ಈಸ್ಟ್​ ಬೆಂಗಾಲ್​ ಕ್ಲಬ್​ ಆಡಲಿದೆ ಎಂದಿದ್ದಾರೆ.

ಈಸ್ಟ್​ ಬೆಂಗಾಲ್​ 2020-21ರ ಐಎಸ್​ಎಲ್​
ಈಸ್ಟ್​ ಬೆಂಗಾಲ್​ 2020-21ರ ಐಎಸ್​ಎಲ್​

By

Published : Sep 2, 2020, 7:52 PM IST

ಕೋಲ್ಕತ್ತಾ: ಕೋಲ್ಕತ್ತಾದ ದೈತ್ಯ ಫುಟ್​ಬಾಲ್​ ಕ್ಲಬ್ ಆಗಿರುವ ಈಸ್ಟ್​ ಬೆಂಗಾಲ್​ ಎಫ್​ಸಿ​ 2020-21ರ ಆವೃತ್ತಿಯ ಐಎಸ್​ನಲ್ಲಿ ಹೊಸ ತಂಡವಾಗಿ ಆಡಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರಕಟಿಸಿದ್ದಾರೆ.

100 ವರ್ಷ ಪೂರೈಸಿರುವ ಕ್ಲಬ್​ ಪರ ಸಿಮೆಂಟ್​ ಕಂಪನಿಯೊಂದು ಹೂಡಿಕೆ ಮಾಡಲು ಸಿದ್ದವಿದ್ದು ಎಂದಿರುವ ಮಮತಾ, ಎಲ್ಲಾ ಸಮಸ್ಯೆ ಬಗೆಹರಿದಿದ್ದು ಮುಂದಿನ ಇಂಡಿಯನ್ ಸೂಪರ್​ ಲೀಗ್​ನಲ್ಲಿ ಈಸ್ಟ್​ ಬೆಂಗಾಲ್​ ಕ್ಲಬ್​ ಹೊಸ ತಂಡವಾಗಿ ಕಣಕ್ಕಿಳಿಯಲಿದೆ ಎಂದಿದ್ದಾರೆ.

ಈಸ್ಟ್​ ಬೆಂಗಾಲ್​

ಐಎಸ್‌ಎಲ್‌ನ ಪೋಷಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಈಸ್ಟ್​ ಬೆಂಗಾಲ್​ ತಂಡವನ್ನು ಲೀಗ್‌ನ ಹನ್ನೊಂದನೇ ಕ್ಲಬ್ ಆಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಐಎಸ್​ಎಲ್​

ಈ ಹಿಂದಿನ ವರದಿಗಳ ಪ್ರಕಾರ ಈಸ್ಟ್​ ಬೆಂಗಾ್ಲ್​ ತಂಡ ಐಎಸ್​ಎಲ್​ಗೆ ಸೇರ್ಪಡೆಗೊಳ್ಳಲು ಮತ್ತೊಂದು ಸೀಸನ್​ ಕಾಯಬೇಕಾಗಬಹುದು ಎನ್ನಲಾಗಿತ್ತು. ಸಿಮೆಂಟ್​ ಕಂಪನಿಯೊಂದು ಕ್ಲಬ್​ಗೆ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನೆರವು ನೀಡಿದ್ದರಿಂದ ಎಫ್ಎಸ್ಡಿಎಲ್ ಈಸ್ಟ್​ ಬೆಂಗಾಲ್​ ತಂಡವನ್ನು ಐಎಸ್ಎಲ್​ಗೆ ಸೇರಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ABOUT THE AUTHOR

...view details