ಬುಡಾಪೆಸ್ಟ್(ಹಂಗೇರಿ): ಜುವೆಂಟಸ್ ಸ್ಟಾರ್ ಮತ್ತು ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ಪತ್ರಿಕಾ ಗೋಷ್ಠಿಯಲ್ಲಿ ಕೋಪದಲ್ಲಿ ತೆಗೆದುಕೊಂಡ ಒಂದು ನಿರ್ಧಾರ ಒಂದೇ ದಿನ ಕೊಕೊ ಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್( ಸುಮಾರು 29 ಸಾವಿರ ಕೋಟಿ) ನಷ್ಟಕ್ಕೀಡು ಮಾಡಿದೆ.
ಹಂಗೇರಿ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲಗೊಂಡಿದ್ದ ರೊನಾಲ್ಡೊ, ತಮ್ಮ ಮುಂದಿದ್ದ ಕೊಕೊ ಕೋಲಾ ಬಾಟೆಲ್ ತೆಗೆದು ಪಕ್ಕಕ್ಕಿಟ್ಟು, ಕ್ಯಾಮರಾ ಮುಂದೆ ನೀರಿನ ಬಾಟೆಲ್ ತೋರಿಸಿ, ಎಲ್ಲರೂ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದರು.
ಪೋರ್ಚುಗಲ್ ಸ್ಟಾರ್ರ ಈ ಒಂದು ಸೂಚನೆಯಿಂದ 2020ರ ಯೂರೋ ಕಪ್ ಸ್ಪಾನ್ಸರ್ಗಳಲ್ಲಿ ಒಂದಾಗಿದ್ದ ಕೊಕೊ ಕೋಲಾ ಕಂಪನಿಯ ಮಾರ್ಕೆಟ್ ಮೇಲೆ ಭಾರಿ ಪರಿಣಾಮ ಬೀರಿದೆ. ಆ ಕಂಪನಿಯ ಶೇರು 4 ಬಿಲಿಯನ್ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದರ ಮೌಲ್ಯ 29,331 ಕೋಟಿ ಎಂದು ತಿಳಿದು ಬಂದಿದೆ,
ಇನ್ನು ಮಂಗಳವಾರ ನಡೆದ ಹಂಗೇರಿ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ 3-0ಯ ಜಯ ದಾಖಲಿಸಿದೆ. ರಾಫೌಲ್ ಗೆರೆರೋ ಒಂದು ಗೋಲು ಸಿಡಿಸಿದರೆ, ರೋನಾಲ್ಡೊ 2 ಗೋಲು ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ಇದನ್ನು ಓದಿ:ಮಾಧ್ಯಮಗೋಷ್ಠಿಯಲ್ಲಿ ಕೊಕಾ ಕೋಲಾ ತೆಗೆಸಿ, ನೀರು ಕುಡಿಯಿರಿ ಎಂದು ಸಲಹೆ ಕೊಟ್ಟ ರೊನಾಲ್ಡೊ