ಕರ್ನಾಟಕ

karnataka

ETV Bharat / sports

ಕೊರೊನಾ ದಾಳಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಕೇರಳ ಸರ್ಕಾರ ಕೊಂಡಾಡಿದ ಬಲ್ಗೇರಿಯಾ ಫುಟ್ಬಾಲ್​ ಕೋಚ್​.. - ಕ್ವಾರಂಟೈನ್​

ತಮ್ಮ ಆರೋಗ್ಯವನ್ನು ನಿತ್ಯ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದ ಸ್ಥಳೀಯ ಆರೋಗ್ಯಾಧಿಕಾರಿ, ಪೊಲೀಸ್​ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿರುವ ಡಿಮಿಟರ್, ಒಮ್ಮೆ ಸಿಎಂ ಹಾಗೂ ಆರೋಗ್ಯ ಸಚಿವರನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ಅರ್ಪಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Bulgarian football coach
ಬಲ್ಗೇರಿಯಾದ ಫುಟ್​ಬಾಳ್​ ಆಟಗಾರ

By

Published : Apr 13, 2020, 10:06 AM IST

ಕೊಚ್ಚಿ: ದೇಶದಲ್ಲಿ ಮೊದಲ ಕೊರೊನಾ ವೈರಸ್​ ಸೋಂಕು ತಗುಲಿ ಹೆಚ್ಚು ಪರಿಣಾಮ ಎದುರಿಸಿದ್ದ ಕೇರಳ ರಾಜ್ಯ ಸರ್ಕಾರ ಕೊರೊನಾವನ್ನು ಹಿಮ್ಮೆಟ್ಟಿಸಿದ ಕಾರ್ಯವನ್ನು ವಿದೇಶಿ ಫುಟ್​ಬಾಲ್ ಕೋಚ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಲ್ಗೇರಿಯಾದ ಡಿಮಿಟರ್​ ಪಂತೇವ್​, ಮಾರ್ಚ್​ 4ರಂದು ಪಲಕ್ಕಾಡ್​ಗೆ ತೆರಳಿದ್ದ ವೇಳೆ ಪಟ್ಟಾಂಬಿಯಲ್ಲಿ ಅನಿವಾರ್ಯವಾಗಿ ಕ್ವಾರಂಟೈನಲ್ಲಿರುವಂತಾಗಿತ್ತು. ಇವರು ದುಬೈ ಮೂಲದ ಹೆಚ್​16 ಸ್ಫೋರ್ಟ್ಸ್​ ಸರ್ವೀಸ್​ ಸಂಸ್ಥೆಯ ಕೋರಿಕೆ ಮೇರೆಗೆ ವೃತ್ತಿಪರ ತರಬೇತಿ ಕೇಂದ್ರ ಸ್ಥಾಪಿಸಲು ಅಧ್ಯಯನ ನಡೆಸುವ ಸಲುವಾಗಿ ತೆರಳಿದ್ದ ವೇಳೆ ನಿರ್ಬಂಧಿತರಾಗಿದ್ದರು. "ಯುರೋಪಿನಲ್ಲಿ ವೈರಸ್​ ಹರಡುತ್ತಿರುವುದು ಹಾಗೂ ಅಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಕೇಳಿದರೆ ಈಗಲು ನಾನು ಮೂಕನಾಗುತ್ತೇನೆ. ಆದರೆ, ವೈರಸ್​ ಹರಡುವ ವೇಳೆ ನಾನು ಇದ್ದಂತಹ ಕೇರಳ ರಾಜ್ಯವನ್ನು ಮಾತ್ರ ನಾನು ಸ್ಮರಿಸಿಕೊಳ್ಳುತ್ತೇನೆ ಮತ್ತು ಆ ರಾಜ್ಯಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಡಿಮಿಟರ್​ ಹೇಳಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ವೈರಸ್​ ಹರಡದಂತೆ ತಡೆಯಲು ನಾಯಕತ್ವವಹಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಮಯದಲ್ಲಿ ನಾನೂ ಮನೆಗೆ ಹೋಗಬೇಕೆಂದು ಚಿಂತಿಗೇಡಾಗಲಿಲ್ಲ. ಗೌರವಾನ್ವಿತ ಮುಖ್ಯಮಂತ್ರಿಗಳು ಪರಿಸ್ಥಿತಿಯ ಉಸ್ತುವಾರಿವಹಿಸಿಕೊಂಡರು. ಆರೋಗ್ಯ ಸಚಿವೆ ಶೈಲಜಾ ಟೀಚರ್​ ಅವರ ಜೊತೆ ರಾಜ್ಯದಲ್ಲಿನ ವಿಪತ್ತು ನಿರ್ವಹಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ನಾನು ಕೂಡ ಸಾಕ್ಷಿಯಾಗಿದ್ದೇನೆ. ಈ ಭೀಕರ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಅವರ ಬದ್ಧತೆ ಹಾಗೂ ಕಠಿಣ ಪರಿಶ್ರಮಕ್ಕಾಗಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆಯುತ್ತಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.

ಇದರ ಜೊತೆಗೆ ಸ್ವತಃ ತಮ್ಮ ಆರೋಗ್ಯವನ್ನು ದಿನನಿತ್ಯ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದ ಸ್ಥಳೀಯ ಆರೋಗ್ಯಾಧಿಕಾರಿ, ಪೊಲೀಸ್​ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿರುವ ಡಿಮಿಟರ್​ ಒಮ್ಮೆ ಸಿಎಂ ಹಾಗೂ ಆರೋಗ್ಯ ಸಚಿವರನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details