ನವದೆಹಲಿ :ಭಾರತ ತಂಡ ಎರಡು ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ಮತ್ತೊಂದು ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ವೃತ್ತಿ ಜೀವನದಲ್ಲಿ ಮೊದಲ ಶತಕ ಸಿಡಿಸಿದ ಬ್ಯಾಟ್ ಅಂತರಿಕ್ಷ ಯಾನ ಮಾಡುವ ಮೂಲಕ ವಿಶೇಷ ಗೌರವಕ್ಕೆ ಪಾತ್ರವಾಗಿದೆ.
ಏಷ್ಯಾದ ಬಹುದೊಡ್ಡ ಮಾರ್ಕೆಟ್ ಕಲೆಕ್ಷನ್ ಸಂಸ್ಥೆ ಎನ್ಎಫ್ಟಿ(NFT) ಲೆಜೆಂಡರಿ ಕ್ರಿಕೆಟರ್ ಬ್ಯಾಟನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಅಂತರಿಕ್ಷಕ್ಕೆ ತೆರಳಿದ ಮೊದಲ ಬ್ಯಾಟ್ ಎಂಬ ಹೆಗ್ಗಳಿಕೆಗೆ ಯುವರಾಜ್ ಸಿಂಗ್ ಮೊದಲ ಶತಕದ ಬ್ಯಾಟ್ ಪಾತ್ರವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಂಸ್ಥೆಯ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
ಭೂಮಿಯಿಂದ ಕಕ್ಷೆಗೆ ಉಡಾವಣೆ ಮಾಡಿದ ಹಾಟ್ ಏರ್ ಬಲೂನ್ ಯುವರಾಜ್ ಸಿಂಗ್ ಅವರ ಮೊದಲ ಶತಕದ ಬ್ಯಾಟ್ ಹೊತ್ತೊಯ್ದಿತು. ಈ ವಿಶೇಷ ವಿಡಿಯೋವನ್ನು ಯುವಿಯ ಅಭಿಮಾನಿಗಳಿಗೆ ಸಮರ್ಪಿಸಲಾಗಿದೆ. ಈ ಅಂತರಿಕ್ಷಯಾನದ ಸಂಪೂರ್ಣ ವಿಡಿಯೋವನ್ನು ಶೀಘ್ರದಲ್ಲೇ Colexionನ ಅಧಿಕೃತ ವೆಬ್‌ಸೈಟ್‌ನಲ್ಲಿ ಶೇರ್ ಮಾಡಲಾಗುತ್ತದೆ.