ಹ್ಯಾಮಿಲ್ಟನ್: ರೇಚಲ್ ಹೇನ್ಸ್ ಶತಕ ಮತ್ತು ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ವನಿತೆಯರ ತಂಡ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ 12 ರನ್ಗಳ ರೋಚಕ ಜಯ ಸಾಧಿಸಿದೆ.
ಶನಿವಾರ ಕಿವೀಸ್ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ನ 3ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 310 ರನ್ಗಳಿಸಿತು. ರೇಚಲ್ ಹೇನ್ಸ್ ಹಾಗೂ ನಾಯಕಿ ಲ್ಯಾನಿಂಗ್(86) 2ನೇ ವಿಕೆಟ್ಗೆ 196ರನ್ ಸೇರಿಸಿ 310ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು. ಹೇನ್ಸ್ 131 ಎಸೆತಗಳಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 130 ರನ್ಗಳಿಸಿದರು. ವಿಕೆಟ್ ಕೀಪರ್ ಅಲಿಸ್ ಹೀಲಿ 28, ಮೂನಿ ಅಜೇಯ 27 ರನ್ಗಳಿಸಿದರು.
ಸೀವರ್ ಶತಕ ವ್ಯರ್ಥ: 311ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 298ರನ್ಗಳಿಸಿತು. ಕೊನೆಯವರೆಗೂ ಇಂಗ್ಲೆಂಡ್ಗೆ ಭರವಸೆ ಮೂಡಿಸಿದ್ದ ನ್ಯಾಟ್ ಸೀವರ್ 85 ಎಸೆತಗಳಲ್ಲಿ 13 ಬೌಂಡರಿ ಸಹಿತ ಅಜೇಯ 109 ರನ್ಗಳಿಸಿದರಾದರೂ ಬೆಂಬಲದ ಕೊರತೆಯಿಂದ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದರು.
ಟಮ್ಮಿ ಬ್ಯೂಮಾಂಟ್ 82 ಎಸೆತಗಳಲ್ಲಿ 74 ನಾಯಕಿ ಹೀದರ್ ನೈಟ್ 51 ಎಸೆತಗಳಲ್ಲಿ 40, ಸೋಫಿಯಾ ಡಾಂಕ್ಲಿ 32 ಎಸೆತಗಳಲ್ಲಿ 28, ಕ್ಯಾಥರಿನ್ ಬ್ರಂಟ್ 21 ಎಸೆತಗಳಲ್ಲಿ 25 ರನ್ಗಳಿಸಿದರು.