ಮುಂಬೈ: ಐಸಿಸಿ 2022ರ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದ್ದು, ಕಿವೀಸ್ ನಾಡಿನಲ್ಲಿ ನಡೆಯುವ ಈ ಕದನದಲ್ಲಿ ಭಾರತ ವನಿತೆಯರು ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
8 ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಭಾರತ ಮಾರ್ಚ್ 6ರಂದು ಪಾಕಿಸ್ತಾನ, ಮಾರ್ಚ್ 10ರಂದು ನ್ಯೂಜಿಲ್ಯಾಂಡ್, ಮಾರ್ಚ್ 12ರಂದು ವೆಸ್ಟ್ ಇಂಡೀಸ್, ಮಾರ್ಚ್ 16ರಂದು ಇಂಗ್ಲೆಂಡ್, 19ರಂದು ಆಸ್ಟ್ರೇಲಿಯಾ, 22ರಂದು ಬಾಂಗ್ಲಾದೇಶ ಮತ್ತು 27ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.
ಮಾರ್ಚ್ 4ರಂದು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ಎದುರಾಗಲಿವೆ. ಏಪ್ರಿಲ್ 3ರಂದು ಕ್ರೈಸ್ಟ್ಚರ್ಚ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.