ಕರ್ನಾಟಕ

karnataka

ETV Bharat / sports

ಮಹಿಳಾ ಏಷ್ಯಾಕಪ್​ನಲ್ಲಿ ಅ. 7ರಂದು ಭಾರತ-ಪಾಕಿಸ್ತಾನ ಫೈಟ್​.. ಟೀಂ ಇಂಡಿಯಾ ಪ್ರಕಟ - Etv bharat kannada

ಮಹಿಳಾ ಏಷ್ಯಾಕಪ್​​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ.

Women Asia Cup
Women Asia Cup

By

Published : Sep 21, 2022, 11:52 AM IST

ಢಾಕಾ(ಬಾಂಗ್ಲಾದೇಶ):ಪುರುಷರ ಏಷ್ಯಾಕಪ್​ ಮುಕ್ತಾಯದ ಬೆನ್ನಲ್ಲೇ ಇದೀಗ ಮಹಿಳಾ ಏಷ್ಯಾಕಪ್​ ಟೂರ್ನಾಮೆಂಟ್​ಗೆ ವೇದಿಕೆ ಸಿದ್ಧಗೊಂಡಿದೆ. ಅಕ್ಟೋಬರ್​​ 1ರಿಂದ ಪಂದ್ಯಗಳು ಶುರುವಾಗಲಿದ್ದು, ಸಾಂಪ್ರದಾಯಿಕ ಎದುರಾಳಿ ತಂಡಗಳಗಾದ ಭಾರತ-ಪಾಕಿಸ್ತಾನ ಅಕ್ಟೋಬರ್​ 7ರಂದು ಮುಖಾಮುಖಿಯಾಗಲಿವೆ.

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ-ಥೈಲ್ಯಾಂಡ್​ ಕಣಕ್ಕಿಳಿಯಲಿವೆ. ಇದೇ ದಿನ ಭಾರತ-ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಸಹ ನಡೆಯಲಿದೆ. ಈ ಟೂರ್ನಾಮೆಂಟ್​​ನಲ್ಲಿ ಏಳು ತಂಡಗಳು ಮುಖಾಮುಖಿಯಾಗಲಿದ್ದು, ಪ್ರತಿ ತಂಡ ಆರು ಪಂದ್ಯಗಳನ್ನಾಡಲಿದೆ. ಟಾಪ್ 4 ತಂಡಗಳು ಸೆಮಿಫೈನಲ್​​ಗೆ ಲಗ್ಗೆ ಹಾಕಲಿವೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧದ T20, ODI ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ, ಕಿರಣ್​ಗೆ ಚೊಚ್ಚಲ ಬುಲಾವ್​​

ಅಕ್ಟೋಬರ್​​ 13ರಿಂದ ಸೆಮಿಫೈನಲ್ ಪಂದ್ಯ ನಡೆಯಲಿದ್ದು, 15ರಂದು ಪ್ರಶಸ್ತಿಗೋಸ್ಕರ ಎರಡು ತಂಡಗಳು ಸೆಣಸಾಡಲಿವೆ. ಈ ಸಲದ ಏಷ್ಯಾಕಪ್​ ಟಿ20 ಮಾದರಿಯಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಾಮೆಂಟ್​​ನಲ್ಲಿ ಆರು ಸಲ ಚಾಂಪಿಯನ್​ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್​, ಮಲೇಷ್ಯಾ ಮತ್ತು ಯುಎಇ ಭಾಗಿಯಾಗಲಿವೆ. ಟೂರ್ನಾಮೆಂಟ್​ನ ವೇಳಾಪಟ್ಟಿಯನ್ನು ಜಯ್ ಶಾ ರಿಲೀಸ್ ಮಾಡಿದ್ದಾರೆ. 2018ರ ಬಳಿಕ ಬಾಂಗ್ಲಾದೇಶ ಏಷ್ಯಾಕಪ್​ ಆಯೋಜನೆ ಮಾಡ್ತಿದ್ದು, ಕೋವಿಡ್​ ಬಳಿಕ ಟೂರ್ನಾಮೆಂಟ್​ ನಡೆದಿಲ್ಲ.

ಟೀಂ ಇಂಡಿಯಾ ಮಹಿಳಾ ತಂಡ:ಹರ್ಮನ್​ಪ್ರೀತ್ ಕೌರ್​(ಕ್ಯಾಪ್ಟನ್​), ಸ್ಮೃತಿ ಮಂದಾನ(ಉ.ನಾಯಕಿ), ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ರೋಡ್ರಿಗಸ್​, ಮೇಘನಾ, ರಿಚಾ ಘೋಷ್​(ವಿ.ಕೀ), ಸ್ನೇಹಾ ರಾಣಾ, ಹೇಮಲತಾ, ಮೇಘನಾ ಸಿಂಗ್​, ರೇಣುಕಾ ಠಾಕೂರ್, ಪಿ. ವಸ್ತ್ರಕರ್, ಆರ್​. ಗಾಯಕ್ವಾಡ, ರಾಧಾ ಯಾದವ್​​, ನವಗಿರಿ

ಮೀಸಲು ಆಟಗಾರರು: ತಾನಿಯಾ ಭಾಟಿಯಾ, ಸಿಮ್ರಾನ್​

ABOUT THE AUTHOR

...view details