ಮುಂಬೈ:ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಅದ್ದೂರಿ ಪ್ರದರ್ಶನ ತೋರಿದ ಭಾರತದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ತಮ್ಮ ಪ್ರದರ್ಶನವನ್ನು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಮುಂದುವರಿಸುವ ವಿಶ್ವಾದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಮಯಾಂಕ್ ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ 150 ಮತ್ತು 62 ರನ್ಗಳಿಸಿದ್ದರು. ಇವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಭಾರತ ಕೀವಿಸ್ ವಿರುದ್ಧ 1-0ಯಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಂಡು ಟೆಸ್ಟ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.
ಈ ಪಂದ್ಯದಲ್ಲಿ ನಾನು ಎರಡನೇ ಶತಕವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅರ್ಧಶತಕವಾಗಿ ಪರಿವರ್ತಿಸಿದ್ದಕ್ಕೆ ಖುಷಿಯಿದೆ. ನಾವು ದಕ್ಷಿಣ ಆಫ್ರಿಕಾದಲ್ಲಿ ವಿದೇಶಿ ಸವಾಲು ಆನಂದಿಸಲಿದ್ದೇವೆ ಮತ್ತು ಅದಕ್ಕಾಗಿ ನಾವೆಲ್ಲ ಎದುರು ನೋಡುತ್ತಿದ್ದೇವೆ ಎಂದು ಪಂದ್ಯದ ನಂತರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಮಯಾಂಕ್ ಹೇಳಿದ್ದಾರೆ.