ಹೈದರಾಬಾದ್:ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿಗೆ ಟ್ವೀಟ್ ಮೂಲಕ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಧೈರ್ಯ ತುಂಬಿದ್ದರು. ಇದಕ್ಕೆ ರನ್ ಮಷಿನ್ ರಪ್ಲೈ ಮಾಡಿ, ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಹೀಗೇ ಮಿಂಚಿ ಹಾಗೂ ಬೆಳೆಯಿರಿ ಎಂದು ಶುಭ ಹಾರೈಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ ಹರಿದು ಬಂದಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸಿಮೀತ ಓವರ್ಗಳ ಸರಣಿಯಲ್ಲೂ ಇದು ಮುಂದುವರೆದಿದೆ. ಹೀಗಾಗಿ, ಅನೇಕರು ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿ, ತಂಡದಿಂದ ಕೈಬಿಡುವಂತೆ ಸಲಹೆ ನೀಡಿದ್ದರು. ಈ ವೇಳೇ ಟ್ವೀಟ್ ಮಾಡಿದ್ದ ಬಾಬರ್ ಆಜಂ,‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಈ ಟ್ವೀಟ್ಗೆ ಇದೀಗ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.