ಕರಾಚಿ(ಪಾಕಿಸ್ತಾನ) :ಈಗಾಗಲೇ ಟಿ-20 ಕ್ರಿಕೆಟ್(T-20 Cricket) ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ(Virat kohli) ಮುಂಬರುವ ದಿನಗಳಲ್ಲಿ ಏಕದಿನ(ODI) ಕ್ರಿಕೆಟ್ ನಾಯಕತ್ವಕ್ಕೂ ವಿದಾಯ ಘೋಷಣೆ ಮಾಡಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಆಫ್ರಿದಿ(shahid afridi) ಮಾತನಾಡಿದ್ದಾರೆ.
ಓರ್ವ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಮತ್ತಷ್ಟು ಸಾಧನೆ ಮಾಡಲು ಎಲ್ಲ ಮಾದರಿ ಕ್ರಿಕೆಟ್ ನಾಯಕತ್ವ ತ್ಯಜಿಸಬೇಕು ಎಂದಿದ್ದಾರೆ. ಭಾರತೀಯ ಕ್ರಿಕೆಟ್(Indian cricket)ಗೆ ವಿರಾಟ್ ಓರ್ವ ಅದ್ಭುತ ಶಕ್ತಿಯಾಗಿದ್ದಾರೆ.
ಮೂರು ಮಾದರಿ ಕ್ರಿಕೆಟ್ನಿಂದ ನಾಯಕತ್ವ ತ್ಯಜಿಸಿದರೆ ಖಂಡಿತವಾಗಿ ಬ್ಯಾಟಿಂಗ್ನಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿದ್ದಾರೆಂದು ಮಾಜಿ ಆಲ್ರೌಂಡರ್ ಅಭಿಪ್ರಾಯಪಟ್ಟಿದ್ದಾರೆ.
ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಆಫ್ರಿದಿ, ವಿರಾಟ್ ಕೊಹ್ಲಿ ಓರ್ವ ಅಗ್ರ ಬ್ಯಾಟರ್ ಆಗಿದ್ದು, ನಾಯಕತ್ವದಿಂದ ಕೆಳಗಿಳಿದು, ಯಾವುದೇ ರೀತಿಯ ಒತ್ತಡವಿಲ್ಲದೇ ಮುಕ್ತವಾಗಿ ಕ್ರಿಕೆಟ್ ಆಡಬೇಕು ಎಂದಿದ್ದಾರೆ.
ರೋಹಿತ್, ಬಿಸಿಸಿಐ ಪರ ಆಫ್ರಿದಿ ಬ್ಯಾಟ್
ಟಿ-20 ಕ್ರಿಕೆಟ್ ನಾಯಕತ್ವಕ್ಕೆ ವಿರಾಟ್ ವಿದಾಯ ಘೋಷಣೆ ಮಾಡ್ತಿದ್ದಂತೆ ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಆಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ-20 ನಾಯಕನನ್ನಾಗಿ ರೋಹಿತ್ ಶರ್ಮಾ ಅವರನ್ನ ನೇಮಕ ಮಾಡಿರುವ ಬಿಸಿಸಿಐ(BCCI) ನಿರ್ಧಾರ ಅತ್ಯುತ್ತಮವಾಗಿದೆ.
ಈ ಹಿಂದೆ ನಾನು ರೋಹಿತ್ ಶರ್ಮಾ ಜೊತೆ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರು ಆಕ್ರಮಣಶೀಲ ಹಾಗೂ ತಾಳ್ಮೆಯ ಗುಣ ಹೊಂದಿರುವ ಆಟಗಾರನಾಗಿದ್ದು, ಟೀಂ ಇಂಡಿಯಾಗೆ ಇದರ ಲಾಭ ಸಿಗಲಿದೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್(Indian premier league) ಲೀಗ್ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ಶಾಹಿದ್ ಆಫ್ರಿದಿ ಒಂದೇ ತಂಡದಲ್ಲಿ ಆಟವಾಡಿದ್ದರು.
ಇದನ್ನೂ ಓದಿರಿ:ಬ್ಯಾಟಿಂಗ್ ಕಡೆಗೆ ಗಮನ ಹರಿಸಲು ಕೊಹ್ಲಿ ODI ನಾಯಕತ್ವವನ್ನು ತ್ಯಜಿಸಬಹುದು: ರವಿಶಾಸ್ತ್ರಿ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮಾತನಾಡಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ,(Former India head coach Ravi Shastri) ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಾಯಕತ್ವ ಸಹ ತ್ಯಜಿಸಬಹುದು ಎಂಬ ಸುಳಿವು ನೀಡಿದ್ದರು.