ಇಂದೋರ್: ಮಂಗಳವಾರ ಇಂದೋರ್‌ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ 20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ಕೊಡುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ವಿಶ್ವಕಪ್ನ ಟ್ರಯಲ್ ರನ್ನ ಮೂರು ಪಂದ್ಯಗಳಲ್ಲಿ ಈಗಾಗಲೇ ಭಾರತ 2-0 ಯಿಂದ ಸರಣಿ ವಶ ಪಡಿಸಿಕೊಂಡಿದೆ.
ಬಿಸಿಸಿಐನ ಮೂಲಗಳ ಪ್ರಕಾರ, ಅಕ್ಟೋಬರ್ 23ರಂದು ಭಾರತ ಮೆಲ್ಬೋರ್ನ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎರುರಿಸಲಿರುವ ಕಾರಣ ರೆಸ್ಟ್ ನೀಡಲು ಚಿಂತಿಸಲಾಗಿದೆ. ಕೊಹ್ಲಿ ತುಂಬಾ ಸಮಯದ ನಂತರ ಮತ್ತೆ ಫಾರ್ಮಿಗೆ ಮರಳಿರುವುದು ಭಾರತಕ್ಕೆ ಆಸರೆಯಾಗಿದೆ. ಹೀಗಾಗಿ ಮುಂದಿನ ಪಂದ್ಯಕ್ಕೆ ರೆಸ್ಟ್ ಕೊಡುವ ಸಾಧ್ಯತೆ ಹೆಚ್ಚಿದೆ. ವಿಶ್ವ ಕಪ್ಗೆ ಇದೇ ಫಾರ್ಮ್ ಮುಂದುವರೆಸುವ ಅಗತ್ಯ ಇರುವುದರಿಂದ ವಿಶ್ರಾಂತಿ ನೀಡುವ ಚಿಂತನೆ ಮಾಡಲಾಗಿದೆ.