ಕರ್ನಾಟಕ

karnataka

ETV Bharat / sports

ಕೊಹ್ಲಿ ಎಂದಿಗೂ ಮರೆಯಲಾಗದ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್: ಟಿಮ್ ಪೇನ್ - ಟಿಮ್ ಪೇನ್​

2018-19ರ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಪರಸ್ಪರ ನಾಯಕರಾಗಿ ತಂಡಗಳನ್ನು ಮುನ್ನಡೆಸಿದ್ದರು. ಈ ಸರಣಿಯ ವೇಳೆ ಮೈದಾನದಲ್ಲಿ ಹಲವು ಕಿಚ್ಚೆಬ್ಬಿಸುವ ಘಟನೆಗಳು ಆಸಕ್ತಿದಾಯಕ ಕಥಾವಸ್ತುವಾಗಿದ್ದವು. ಭಾರತ ಈ ದ್ವೀಪ ರಾಷ್ಟ್ರದಲ್ಲಿ ಟೆಸ್ಟ್​ ಸರಣಿ ಗೆದ್ದ ಏಕೈಕ ಏಷ್ಯಾ ತಂಡ ಎನಿಸಿಕೊಂಡಿತ್ತು.

ಕೊಹ್ಲಿ - ಟಿಮ್ ಪೇನ್
ಕೊಹ್ಲಿ - ಟಿಮ್ ಪೇನ್

By

Published : May 16, 2021, 9:36 PM IST

ಮುಂಬೈ:ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಯನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್ ಎಂದಿರುವ ಆಸ್ಟ್ರೇಲಿಯಾ ಟೆಸ್ಟ್​ ತಂಡದ ನಾಯಕ ಟಿಮ್ ಪೇನ್, ತಾನು ಅವರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇವರಿಬ್ಬರು 2018-19ರ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಪರಸ್ಪರ ನಾಯಕರಾಗಿ ತಂಡಗಳನ್ನು ಮುನ್ನಡೆಸಿದ್ದರು. ಈ ಸರಣಿಯ ವೇಳೆ ಮೈದಾನದಲ್ಲಿ ಹಲವು ಕಿಚ್ಚೆಬ್ಬಿಸುವ ಘಟನೆಗಳು ಆಸಕ್ತಿದಾಯಕ ಕಥಾವಸ್ತುವಾಗಿದ್ದವು. ಭಾರತ ಈ ದ್ವೀಪ ರಾಷ್ಟ್ರದಲ್ಲಿ ಟೆಸ್ಟ್​ ಸರಣಿ ಗೆದ್ದ ಏಕೈಕ ಏಷ್ಯಾ ತಂಡ ಎನಿಸಿಕೊಂಡಿತ್ತು.

"ನಾನು ಈಗಾಗಲೇ ಹಲವು ಬಾರಿ ಹೇಳಿದ್ದೇನೆ, ವಿರಾಟ್ ಕೊಹ್ಲಿಯನ್ನು ಯಾರಾದರೂ ತಮ್ಮ ತಂಡದಲ್ಲಿ ಆಡಿಸಲು ಬಯಸುವಂತಹ ಆಟಗಾರ. ಅವರು ಅದ್ಭುತ ಸ್ಪರ್ಧಾಳು, ಅದ್ಭುತ ಆಟವನ್ನಾಡುವ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್‌" ಎಂದು ಟಿಮ್ ಪೇನ್ ಹೇಳಿದ್ದಾರೆ.

ಅವರ ವಿರುದ್ಧ ಆಡುವುದು ಒಂದು ಸವಾಲು ಮತ್ತು ಎದುರಾಳಿ ತಂಡಕ್ಕೆ ತಮ್ಮ ಅಮೋಘ ಆಟದಿಂದ ಒತ್ತಡಕ್ಕೆ ಸಿಲುಕಿಸುವಂತಹ ಆಟಗಾರ ಹಾಗೂ ಎಂದಿಗೂ ಸಹ ಮರೆಯಲಾಗದಂತಹ ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಹೇಳಿದ್ದಾರೆ.

ಆಸಕ್ತಿಕರ ಸಂಗತಿಯಂದರೆ ಕೊಹ್ಲಿ ಪಿತೃತ್ವ ರಜೆ ಮೇಲೆ ಭಾರತಕ್ಕೆ ಹಿಂತಿರುಗುವ ವೇಳೆ, ನಮಗೆ ಕೊಹ್ಲಿ ಭಾರತ ತಂಡದಲ್ಲಿ ಇತರರಂತೆ ಒಬ್ಬ ಸಾಮಾನ್ಯ ಆಟಗಾರ, ನಮಗೆ ಅವರಿಂದ ಯಾವುದೇ ತೊಂದರೆಯಿಲ್ಲ ಎಂದು ಟಿಮ್ ಹೇಳಿಕೆ ನೀಡಿದ್ದರು. ಇದೀಗ ಅವರೇ ಉಲ್ಟಾ ಹೊಡೆದಿದ್ದಾರೆ.

ಇದನ್ನು ಓದಿ:24 ವರ್ಷಗಳ ವೃತ್ತಿ ಜೀವನದಲ್ಲೇ ನನ್ನ ಅತ್ಯುತ್ತಮ ದಿನ ಅದು : ಸಚಿನ್ ತೆಂಡೂಲ್ಕರ್​

ABOUT THE AUTHOR

...view details