ನವದೆಹಲಿ: ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 186 ರನ್‌ಗಳ ಸುದೀರ್ಘ ಇನ್ನಿಂಗ್ಸ್ ಆಡುವ ಮೂಲಕ ಟೀಕಾಕಾರರಿಗೆ ಉತ್ತರಿಸಿ, ಭವಿಷ್ಯದ ಸುಳಿವು ನೀಡಿದರು. ಟಿ20 ಹಾಗೂ ಏಕದಿನದಲ್ಲಿ ಶತಕ ಬಾರಿಸಿದ ಅವರು ಸುದೀರ್ಘ ಕಾಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವಲ್ಲಿ ಎಡವಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಲು ಕೊಹ್ಲಿ 1205 ದಿನ ಕಾಯಬೇಕಾಯಿತು.
ಕೊಹ್ಲಿಯ ಈ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತು. ಜೂನ್ 7 ರಂದು ಓವೆಲ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬ್ಯಾಟರ್ಗಳು ಆಸ್ಟ್ರೇಲಿಯಾವನ್ನು ಕಾಡಲಿದ್ದಾರೆ ಎಂಬ ಸಂದೇಶವನ್ನು ನಾಲ್ಕನೇ ಟೆಸ್ಟ್ನಲ್ಲಿ ನೀಡಿದರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 28ನೇ ಟೆಸ್ಟ್ ಶತಕ ಸಿಡಿಸುತ್ತಿದ್ದಂತೆ ಟೀಕಾಕಾರರು ಅಭಿಮಾನಿಗಳನ್ನು ಕೆಣಕಿದರು, ವೀಕ್ಷಕ ವಿವರಣೆಗಾರ ಮತ್ತು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಬಹಳ ಸಮಯದ ನಂತರ ಕೊಹ್ಲಿ ಶತಕ ಬಾರಿಸುವ ಮೂಲಕ ದೊಡ್ಡ ಹೊರೆಯನ್ನು ಇಳಿಸಿದ್ದಾರೆ. ಈಗ ಅವರು ಒತ್ತಡವಿಲ್ಲದೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದಿದ್ದರು. ಅಹಮದಾಬಾದ್‌ನಲ್ಲಿ ಈ ಶತಕ 41 ಇನ್ನಿಂಗ್ಸ್‌ಗಳ ನಂತರ ಬಂದಿತ್ತು. ನವೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದರು.